ಸೋಮನಾಥಪುರ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯಲ್ಲಿನ ದೋಷಗಳ ಪರಿಶೀಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ ಹೆಸರು ತಿದ್ದುಪಡಿ, ಹೆಸರು ಬಿಟ್ಟಿರುವುದು, ಜನ್ಮದಿನಾಂಕ, ವಯಸ್ಸು, ವಿಳಾಸ, ತಂದೆ&ತಾಯಿಯರ ಹೆಸರು, ಊರು ಬಿಟ್ಟಿರುವ ಮುಂತಾದವುಗಳ ಬಗ್ಗೆ 45 ಅರ್ಜಿ ಬಂದಿರುತ್ತದೆ.ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರನ್ನು ಪ್ರತ್ಯೇಕವಾಗಿ ವಿಚಾರಿಸಿ ಮಾಹಿತಿ ಪಡೆಯಲಾಯಿತು.