1987ರಲ್ಲಿ ಜನಿಸಿದವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ ಒಂದನ್ನು ದಾಖಲಾತಿ ಅಂದರೆ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇದರಲ್ಲಿ ಯಾವುದಾದರು ಒಂದು ದಾಖಲಾತಿಯನ್ನು ನೀಡಬೇಕು. 1987ರಿಂದ 2004ರ ವರೆಗೆ ಜನಿಸಿದವರು ಅವರ ದಾಖಲಾತಿ ಹಾಗೂ ತಂದೆ ಅಥವಾ ತಾಯಿಯ ಎಪಿಕ್ ಕಾರ್ಡ್ ನೀಡಬೇಕು. 2004 ನಂತರ ಜನಿಸಿದವರು ತಂದೆ, ತಾಯಿಯ ಯಾವುದಾದರೊಂದು ದಾಖಲಾತಿ ನೀಡಬೇಕು ಎಂದ ಅವರು, ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕದಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿ ಸಲ್ಲಿಸಬಹುದು.