ಮಾರ್ಚ್ 5 ರಂದು ಮತದಾರರ ಪಟ್ಟಿ ಮ್ಯಾಪಿಂಗ್ ಅಭಿಯಾನ ಬಿ.ಫೌಜಿಯಾ ತರನ್ನುಮ್

ಬಿ.ಫೌಜಿಯಾ ತರನ್ನುಮ್
ಬಿ.ಫೌಜಿಯಾ ತರನ್ನುಮ್
Published on
ಕಲಬುರಗಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಪೂರ್ವಸಿದ್ಧತೆ ಭಾಗವಾಗಿ 2022ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕುರಿತು ಇದೇ ಮಾರ್ಚ್ 5 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ವಿಶೇಷ ಅಭಿಯಾನ ಕೈಗೊಂಡಿದ್ದು, ಜೇವರ್ಗಿ, ಗುಲಬರ್ಗಾ ಗ್ರಾಮೀಣ, ಗುಲಬರ್ಗಾ ದಕ್ಷಿಣ ಹಾಗೂ ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರಗಳ ಮತದಾರರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಎಪ್ರಿಲ್-2026ರಲ್ಲಿ ವಿಶೇಷ ಮತದಾರರ ತೀವ್ರ ಪರಿಷ್ಕರಣೆ ನಡೆಸಲು ಉದ್ದೇಶಿಸಿದ್ದು, ರಾಜ್ಯದ ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಬರುವ ಒಟ್ಟು 9 ವಿಧಾನ ಸಭಾ ಮತಕ್ಷೇತ್ರಗಳಲ್ಲಿ 2002ರ ಮತದಾರರ ಪಟ್ಟಿಗೆ 2025 ರ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಪೂರ್ವಸಿದ್ಧತಾ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ 35-ಜೇವರ್ಗಿ, 43-ಕಲಬುರಗಿ ಗ್ರಾಮೀಣ, 44-ಗುಲಬರ್ಗಾ ದಕ್ಷಿಣ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರಗಳ ಮ್ಯಾಪಿಂಗ್ ಪ್ರಗತಿ ಕಡಿಮೆ ಇರುವುದರಿಂದ ಇದೀಗ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಮೇಲ್ಕಂಡ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಮಾರ್ಚ್ 5 ರಂದು ಬಿ.ಎಲ್.ಓ ಅವರು ಮ್ಯಾಪಿಂಗ್ ಕಾರ್ಯದ ವಿಶೇಷ ಅಭಿಯಾನ ಕೈಗೊಳ್ಳಲಿದ್ದು, ಸಾಮಾನ್ಯ ವರ್ಗ, ವಿಶೇಷ ವರ್ಗದವರು, ಗಣ್ಯ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಅವರ ಕುಟುಂಬಗಳು, ಪಕ್ಷದ ಕಾರ್ಯಕರ್ತರು, ಹಿರಿಯ ವ್ಯಕ್ತಿಗಳು, ಕೇಂದ್ರ, ರಾಜ್ಯ ಸರಕಾರಿ, ಅರೆ ಸರಕಾರಿ ನೌಕರರು, ಖಾಸಗಿ ವಲಯದ ನೌಕರರು ಹಾಗೂ ಇವರ ಕುಟುಂಬದವರು, ಅಸಂಘಟಿತ ನೌಕರರು, ಸಂಘಟಿತ ನೌಕರರು, ಸರ್ಕಾರೇತರ ಸಂಸ್ಥೆಗಳು, ಶಾಲಾ ಕಾಲೇಜು ನೌಕರರು, ಹಿರಿಯ ನಾಗರಿಕರು ಹಾಗೂ ಇವರ ಕುಟುಂಬದವರು, ವೃತ್ತಿಪರ ನಿರತ ವ್ಯಕ್ತಿಗಳು ಹಾಗೂ ಅವರ ಕುಟುಂಬದವರ ಹೆಸರುಗಳು ಕೈಬಿಟ್ಟು ಹೋಗದಂತೆ ಮ್ಯಾಪಿಂಗ್ ಕಾರ್ಯ ಮಾಡುವ ನಿಟ್ಟಿನಲ್ಲಿ ತಮ್ಮ ಹೆಸರು ಬಿಟ್ಟು ಹೋಗದಂತೆ ಮತದಾರರು ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net