ಅಮ್ಮಣ್ಣಿ ಕಾಲೇಜಿನಲ್ಲಿ ‘ವಾಯ್ಸ ಆಫ್ ಎಕ್ಸ್‌ಪೀರಿಯನ್ಸ್’ ಸಂಭ್ರಮ

ಅಮ್ಮಣ್ಣಿ ಕಾಲೇಜಿನಲ್ಲಿ  ‘ವಾಯ್ಸ ಆಫ್ ಎಕ್ಸ್‌ಪೀರಿಯನ್ಸ್’ ಕಾರ್ಯಕ್ರಮ
ಅಮ್ಮಣ್ಣಿ ಕಾಲೇಜಿನಲ್ಲಿ ‘ವಾಯ್ಸ ಆಫ್ ಎಕ್ಸ್‌ಪೀರಿಯನ್ಸ್’ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜಿನ ಹಿರಿಯ ಶಿಕ್ಷಕರು ಹಾಗೂ ಮಾಜಿ ಪ್ರಾಂಶುಪಾಲರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಕಾರ್ಯಕ್ರಮ
  • ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವಾಯ್ಸ ಆಫ್ ಎಕ್ಸ್‌ಪೀರಿಯನ್ಸ್
ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವಾಯ್ಸ ಆಫ್ ಎಕ್ಸ್‌ಪೀರಿಯನ್ಸ್’ ಎಂಬ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಕಾಲೇಜಿನ ಹಿರಿಯ ಶಿಕ್ಷಕರು ಹಾಗೂ ಮಾಜಿ ಪ್ರಾಂಶುಪಾಲರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಕಾಲೇಜಿನ ಟ್ರಸ್ಟ್ ಹಾಗೂ ಮ್ಯಾನೇಜ್‌ಮೆಂಟ್ ಕಡೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲೆ ಡಾ. ನಂದ ಕುಲಕರ್ಣಿ ಅವರು ಮಾಜಿ ಪ್ರಾಂಶುಪಾಲೆ ಡಾ. ಬಿ.ಎನ್. ನಾಗಲಕ್ಷ್ಮಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಅವರು ಕಾಲೇಜಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ನಮ್ಮ ಕಾಲೇಜು ಉನ್ನತ ಮಟ್ಟಕ್ಕೆ ತಲುಪಲು ಅವರ ಸಾಮರ್ಥ್ಯವು ಅಧಿಕವಾಗಿದೆ. ಅವರ ಕಾರ್ಯ ಸಾಧನೆ ಈಗಿನ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮಾದರಿಯಾಗಿದೆ ಎಂದರು.
ಮಾಜಿ ಪ್ರಾಂಶುಪಾಲರು ಡಾ. ನಾಗಲಕ್ಷ್ಮಿ ಬಿ.ಎನ್. ಮಾತನಾಡಿ, ಕಾಲೇಜು ನನ್ನ ವೃತ್ತಿಪರ ಮನೆಯಾಗಿದೆ. ನಮ್ಮ ಕೆಲಸದಲ್ಲಿ ನಿರಂತರವಾಗಿ ಉನ್ನತ ಮಟ್ಟಕ್ಕೆ ತಲುಪಲು ಕಾಲೇಜಿನ ಮೂಲವನ್ನು ಮೊದಲು ತಿಳಿದುಕೊಳ್ಳಬೇಕು. ಕರ್ತವ್ಯವನ್ನು ಗೌರವಿಸಿ ಕಾರ್ಯ ನಿರ್ವಹಿಸಿದಾಗ ಮಾತ್ರ ಕಾಲೇಜು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ ಎಂದು ಹೇಳಿದರು.
ಎಂಲ್ಯಾಕ್‌ನ ಸ್ಥಾಪಕ ಡಾ. ಕೆ.ಎನ್.ವಿ ಶಾಸ್ತ್ರಿ ಅವರ ಮೂಲ ಉದ್ದೇಶ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧೈರ್ಯ ಹಾಗೂ ಗೌರವದಿಂದ ಜೀವನದಲ್ಲಿ ಮುನ್ನುಗ್ಗಬೇಕು ಎಂಬುದಾಗಿದೆ. ಹಾಗೆಯೇ ಇಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಧಾರ ಹಾಗೂ ಅವಕಾಶಗಳು ಎಲ್ಲರಿಗೂ ಸ್ಫೂರ್ತಿಯನ್ನು ತುಂಬುತ್ತಿದೆ. ಎಲ್ಲರೂ ಕಾಲೇಜಿನ ಸಂಸ್ಕೃತಿ, ಶಿಸ್ತು, ಜವಾಬ್ದಾರಿ ಮತ್ತು ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಪಡಿಸಿದರೆ ಅತ್ಯುನ್ನತ ಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದರು.
ಇದೇ ವೇಳೆ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕಿ ಡಾ. ಶರ್ಮಿಸ್ಠ ದತ್ತ, ಆಡಳಿತಾಧಿಕಾರಿ ಡಾ. ಅನ್ನದಾನೀಶ ಬಿ.ಎ, ಸಹಾಯಕ ಆಡಳಿತ ಅಧಿಕಾರಿ ಡಾ. ಮಂಜುಳಾ ಕೆ, ಪಿಯುಸಿ ಪ್ರಾಂಶುಪಾಲೆ ವಾದಿರಾಜ್ ಮಾನ್ವಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net