ಮುಳಬಾಗಿಲು: ವಿಧಾನ ಮಂಡಲ ಹಣಕಾಸಿನ ಅಧಿವೇಶನಕ್ಕೆ 53 ಪ್ರಶ್ನೆ ಕೇಳಿದ್ದೇನೆ. ವಿವಿಧ ಇಲಾಖೆಯಲ್ಲಿನ ಸಮಸ್ಯೆ, ಕುಂದು, ಕೊರತೆ ಇದ್ದರೆ ತಿಳಿಸಿ. ಅದರ ಬಗ್ಗೆಯೂ ಸಚಿವರಿಗೆ ಕೇಳಲು ನಿರ್ಧರಿಸಿದ್ದೇನೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.villages
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸೋಮವಾರದಿಂದ ತಾಲೂಕಿನ ಪ್ರತಿ ಗ್ರಾಮಕ್ಕೂ ಪಂಚಾಯಿತಿಮಟ್ಟದಲ್ಲಿ ಅಧಿಕಾರಿಗಳ ಜತೆಗೂಡಿ ಬಸ್ನಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ಪ್ರತಿದಿನ 2 ಗ್ರಾಮ ಪಂಚಾಯಿತಿ ವೀಕ್ಷಣೆ ಮಾಡುವ ಉದ್ದೇಶವನ್ನು ಕೈಗೊಂಡಿದ್ದೇನೆ. 1 ವಾರಕ್ಕೆ 4 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ನಿವಾರಣೆ ಮಾಡಲಾಗುವುದು ಎಂದರು.