ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕುಂದಾಣ ಹೋಬಳಿ, ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಸುಣ್ಣಟ್ಟದ ಬಳಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಎಫ್ಎಸ್ಟಿಪಿ ಪ್ಲಾಂಟ್ ನಿರ್ಮಿಸಲು ಉದ್ದೇಶಿದ್ದು, ಈಗಾಗಲೇ ರಾಷ್ಟ್ರದಲ್ಲಿ ಪ್ರಥಮ ಎಫ್ಎಸ್ಟಿಪಿ ಎಂಬ ಖ್ಯಾತಿಯ ಈ ಪ್ಲಾಂಟ್ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಇಲ್ಲಿ ಸಂಸ್ಕರಿಸಿದ ಮಲದಿಂದ ಗೊಬ್ಬರ ತಯಾರಿಸಿ ಅದನ್ನು ವ್ಯವಸಾಯಕ್ಕೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದೇ ರೀತಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಎಫ್ಎಸ್ಟಿಪಿಟಿಪಿ ನಿರ್ಮಿಸಿದರೆ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆ ಜತೆಗೆ ರೈತರಿಗೆ ಉತ್ತಮ ಕೊಟ್ಟಿಗೆ ಗೊಬ್ಬರ ಸಿಗಲಿದೆ ಎಂದು ಮಾಹಿತಿ ನೀಡಿದರು.