ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶ್ವಕರ್ಮ ಜಯಂತಿ ವಿಶ್ವಕರ್ಮ ಸಮಾಜ, ಕಲೆ ಸಂಸ್ಕೃತಿಗೆ ನೀಡಿರುವ ಕೊಡುಗೆ ಅನನ್ಯ: ಎಚ್.ಎಂ.ರೇವಣ್ಣ ಶ್ಲಾಘನೆ
vihwakarma jayanti
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶ್ವಕರ್ಮ ಸಮಾಜದ ಬಿಲ್ಡಿಂಗ್ ಮೇಲೆ ಬಿಬಿಎಂಪಿ ಹಾಕಿರುವ 25 ಲಕ್ಷ ರೂ ತೆರಿಗೆ ಮನ್ನಾ ?
ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜದ ಪರವಾಗಿದೆ.
ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶ್ವಕರ್ಮ ಜಯಂತಿ
ವಿಶ್ವಕರ್ಮ ಸಮಾಜ, ಕಲೆ ಸಂಸ್ಕೃತಿಗೆ ನೀಡಿರುವ
ಕೊಡುಗೆ ಅನನ್ಯ: ಎಚ್.ಎಂ.ರೇವಣ್ಣ ಶ್ಲಾಘನೆ
ಬೆಂಗಳೂರು:
ಪುರಾತನ ಕಾಲದಿಂದಲೂ ವಿಶ್ವಕರ್ಮ ಸಮಾಜವು ದೇಶದ ಕಲೆ, ಸಂಸ್ಕೃತಿ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದ ಬಿಲ್ಡಿಂಗ್ ಮೇಲೆ ಬಿಬಿಎಂಪಿ ಹಾಕಿರುವ 25 ಲಕ್ಷ ರೂ ತೆರಿಗೆಯನ್ನು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಮನ್ನಾ ಮಾಡಿಸಲು ಪ್ರಯತ್ನಿಸುವುದಾಗಿಯೂ ರೇವಣ್ಣ ಭರವಸೆ ನೀಡಿದರು.
ಹಿಂದಿನಿಂದಲೂ ವಿಶ್ವಕರ್ಮರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ಕೆತ್ತನೆ ಕಲೆಯಲ್ಲಿ ಪಳಗಿರುವ ಅವರು ಶಿಲ್ಪಗಳಿಗೆ ಜೀವ ನೀಡುವ ಹಾಗೂ ಆಭರಣಗಳಿಗೆ ಮೆರಗು ನೀಡುವ ವಿಶೇಷ ಕೌಶಲ ಹೊಂದಿದ್ದಾರೆ ಎಂದರು.
ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜದ ಪರವಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚಿಸುವ ಮೂಲಕ ಆ ಸಮಾಜದ ಪ್ರಗತಿಗೆ ಒತ್ತು ನೀಡಲಾಗಿದೆ ಎಂದು ರೇವಣ್ಣ ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಉಮಾಶ್ರೀ ಅವರು ಮಾತನಾಡಿ, ನಮ್ಮ ಸಮಾಜ ನೇಯ್ಗೆ ಮಾಡಬೇಕು ಎಂದರೆ ಅದಕ್ಕೆ ಬೇಕಾದ ಪರಿಕರ ಮಾಡಲು ವಿಶ್ವಕರ್ಮರು ಬೇಕು. ಆಭರಣ ಕುಸರಿಗಾರಿಕೆ ಅಷ್ಟೇ ಅಲ್ಲ, ದೇಗುಲಗಳಲ್ಲಿ ದೇವರ ವಿಗ್ರಹಗಳನ್ನು ಕೆತ್ತಿ ಪ್ರತಿಷ್ಠಾಪಿಸುವ ವಿಶ್ವಕರ್ಮ ಸಮಾಜದ ಕಾಯಕಕ್ಕೆ ಅಪಾರ ಗೌರವವಿದೆ ಎಂದರು.
ಕಾರ್ಯಕ್ರಮದಲ್ಲಿ ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧೀಶರಾದ ಶ್ರೀ ಕುಮಾರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ವಸುಂದರಾ ವಹಿಸಿದ್ದರು. ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ.ಬಡಿಗೇರ ಅವರು ವಿಶ್ವಕರ್ಮ ಜಯಂತಿ ಬಗ್ಗೆ ಉಪನ್ಯಾಸ ನೀಡಿದರು.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪಿ.ಈಶ್ವರಾಚಾರಿ, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಆರ್.ಮಧುಸೂಧನ್, ಕೆಪಿಸಿಸಿ ಕುಶಲಕರ್ಮಿಗಳ ಅಧ್ಯಕ್ಷ ಪ್ರಸನ್ನಕುಮಾರ್ ಚಳ್ಳಕೆರೆ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
* ನಮ್ಮ ಸಮಾಜ ನೇಯ್ಗೆ ಮಾಡಬೇಕು ಎಂದರೆ ಅದಕ್ಕೆ ಬೇಕಾದ ಪರಿಕರ ಮಾಡಲು ವಿಶ್ವಕರ್ಮರು ಬೇಕು. ಆಭರಣ ಕುಸರಿಗಾರಿಕೆ ಅಷ್ಟೇ ಅಲ್ಲ, ದೇಗುಲಗಳಲ್ಲಿ ದೇವರ ವಿಗ್ರಹಗಳನ್ನು ಕೆತ್ತಿ ಪ್ರತಿಷ್ಠಾಪಿಸುವ ವಿಶ್ವಕರ್ಮ ಸಮಾಜದ ಕಾಯಕಕ್ಕೆ ಅಪಾರ ಗೌರವವಿದೆ.