ಗ್ರಾಮಸ್ಥರು ಧನಸಹಾಯ ಸದ್ಬಳಸಿಕೊಳ್ಳಿ Rural Development Scheme
ಶಿರಾ ತಾಲೂಕು Rural Development Scheme ರಾಮಲಿಂಗಾಪುರ ಹೊಸ ಬಡಾವಣೆಯ ಶ್ರೀ ವಿನಾಯಕ ದೇವಸ್ಥಾನಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ಒಂದುವರೆ ಲಕ್ಷ ಚೆಕ್ ವಿತರಿಸಲಾಯಿತು. ಯೋಜನಾಧಿಕಾರಿ ರಮೇಶ್, ಟ್ರಸ್ಟ್ ಅಧ್ಯಕ್ಷ ಚಂದ್ರಮ್ಮ, ಕಾರ್ಯದರ್ಶಿ ಮನೋರತ್ನಾ, ಖಜಾಂಚಿ ನಾಗರತ್ನಾ, ಸದಸ್ಯರಾದ ಜ್ಯೋತಿ, ಗಂಗಮ್ಮ, ಭಾಗ್ಯಮ್ಮ, ಕಣುಮಕ್ಕ, ಜಯಮ್ಮ, ರೇಣುಕಮ್ಮ, ಜಯಮ್ಮ, ಲಕ್ಷಿ$್ಮದೇವಿ, ರಾಮಚಂದ್ರಪ್ಪ, ಆರ್.ಕೆ.ಗುರುರಾಜು, ಸುಂಕಣ್ಣ, ದಾದಾಪೀರ್, ಶೇಷಾದ್ರಿ, ದ್ಯಾಮಯ್ಯ ಇದ್ದರು.
Published on:
Copied
Follow Us
ಬುಕ್ಕಾಪಟ್ಟಣ:
ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಗಳ ಅಭಿವೃದ್ಧಿಗಾಗಿ ಹಲವು ಯೋಜನೆ ಹಮ್ಮಿಕೊಂಡಿದ್ದು, ಗ್ರಾಮೀಣ ಪ್ರದೇಶದ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಾ- 2 ಯೋಜನಾಧಿಕಾರಿ
Rural Development Scheme
ರಮೇಶ್ ಹೇಳಿದರು.
ಶಿರಾ ತಾಲೂಕು ರಾಮಲಿಂಗಾಪುರ ಹೊಸ ಬಡಾವಣೆಯ ಶ್ರೀ ವಿನಾಯಕ ದೇವಸ್ಥಾನ ನಿಮಾರ್ಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾಗಿರುವ ಒಂದುವರೆ ಲಕ್ಷ ಮೊತ್ತದ ಚೆಕ್ ವಿತರಿಸಿ ಮಾತನಾಡಿ, ದೇಗುಲಗಳ ಜೀಣೋರ್ದ್ಧಾರ, ನಿಮಾರ್ಣ ಕಾರ್ಯಗಳಿಗೆ ಹೆಚ್ಚಿನ ದನಸಹಾಯ ಮಾಡುತ್ತಿದ್ದು, ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡು ದೇಗುಲದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಧರ್ಮಸ್ಥಳ ಮದ್ಯವರ್ಜನ ಶಿಬಿರದ ಅಧ್ಯಕ್ಷ ಬಿ.ಆರ್.ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶದ ಉದ್ದಾರಕ್ಕಾಗಿ ಕಂಕಣ ಕೊಟ್ಟಿದ್ದು, ಎಲ್ಲರೂ ಸಹಕಾರ ನೀಡಬೇಕು. ನೀಡಿದ ಹಣವನ್ನು ನಿಯಮಿತ ಕಾರ್ಯಕ್ಕೆ ಬಳಸಿಕೊಂಡು ದೇಗುಲದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.