ಶಿಕ್ಷಕರಿಲ್ಲದ ಶಾಲೆ ಸ್ವಚ್ಛಗೊಳಿಸಿದ ಗ್ರಾಮಸ್ಥರು

ಗೋನಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರು ಸ್ವಚ್ಛಗೊಳಿಸಿದರು.
ಗೋನಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗ್ರಾಮಸ್ಥರು ಸ್ವಚ್ಛಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಯಂ ಟೀಚರ್ ಇಲ್ಲದೆ ತೊಂದರೆ
  • ಮನವಿಗೆ ಸ್ಪಂದಿಸದ ಅಧಿಕಾರಿಗಳು
ಮಸ್ಕಿ: ಸರ್ಕಾರದ ನಿರ್ದೇಶನದಂತೆ ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆ ಜೂ.1ರಂದು ಗೋನಾಳ ಗ್ರಾಮದ  ಶಾಲೆಯಲ್ಲಿ ತಳಿರು ತೋರಣ ಕಟ್ಟಿ ಸಿಂಗರಿಸಿ ಸಂಭ್ರಮಿಸಿದ್ದು ಕೇವಲ ಒಂದೇ ದಿನ ಮಾತ್ರ ಸೀಮಿತವಾಯಿತು.
ಗ್ರಾಮದ ಅಂಬಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 25ರಿಂದ 30 ಮಕ್ಕಳಿದ್ದು, ಕಾಯಂ ಶಿಕ್ಷಕರಿಲ್ಲದೆ ಶಾಲೆ ಅನಾಥವಾಗಿದೆ. ಗ್ರಾಮಸ್ಥರಿಗೆ ಶಾಲೆಯ ಮೇಲೆ ಎಲ್ಲಿಲ್ಲದ ಪ್ರೀತಿ ಇರುವ ಕಾರಣ ಬುಧವಾರ ಗ್ರಾಮದ ಜನರು ಶಾಲೆ ಆವರಣ ಸ್ವಚ್ಛಗೊಳಿಸಿದರು. 
ಕಾಂಪೌಂಡ್‌ಗೆ ಬಣ್ಣ ಹಚ್ಚಿದರು. ಗ್ರಾಮಸ್ಥರಾದ ಚಂದನ, ಬಸಲಿಂಗಮ್ಮ, ಪಾರ್ವತಮ್ಮ, ಲಕ್ಷ್ಮೀ, ರೇಣುಕಮ್ಮ, ರುದ್ರಮ್ಮ, ದುರುಗಮ್ಮ, ಸಿದ್ದಮ್ಮ, ಕಸ್ತೂರಿ, ಸರಸ್ವತಿ, ಗಂಗಮ್ಮ, ಮಲ್ಲಮ್ಮ, ರಾಮಣ್ಣ, ಯಮನಪ್ಪ, ಹನುಮಂತ, ಪುರುಷೋತ್ತಮ, ಅಮೀನಸಾಬ, ಶೇಷಪ್ಪ, ಅಮರೇಶ, ಮಾಹಾಂತೇಶ ಇತರರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.
ಕಾಯಂ ಶಿಕ್ಷಕರ ನೇಮಕಕ್ಕೆ ಒತ್ತಾಯ: ಯರದೊಡ್ಡಿ ಗ್ರಾಮದ ಶಾಲೆಯಲ್ಲಿ 78 ವಿದ್ಯಾರ್ಥಿಗಳಿದ್ದು  ಮೂರು ತರಗತಿ ಕೊಠಡಿಗಳಿವೆ. ಅದರಲ್ಲಿ ಒಂದು ಕೊಠಡಿ ದುಸ್ಥಿತಿಯಲ್ಲಿದ್ದು, ಮಕ್ಕಳು ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. 
ಕಳೆದ ವರ್ಷ ಇಬ್ಬರು ಅತಿಥಿ ಶಿಕ್ಷಕರು, ಒಬ್ಬ ಕಾಯಂ ಶಿಕ್ಷಕರು ಇದ್ದರು. ಈ ಬಾರಿ ಕಾಯಂ ಶಿಕ್ಷಕರ ವರ್ಗಾವಣೆಯಾಗಿದ್ದು, ಶಿಕ್ಷಕರಿಲ್ಲದಂತಾಗಿದೆ. ಕೂಡಲೇ ಕಾಯಂ ಶಿಕ್ಷಕರನ್ನು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"

ಯರದೊಡ್ಡಿ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಸ್ಥಿತಿ ಅರಿತು ಕಾಯಂ ಶಿಕ್ಷಕರನ್ನು ನಿಯೋಜನೆಗೊಳಿಸಬೇಕು.

— ಪರಶುರಾಮ ಪಾಲಕ
"

ಗೋನಾಳ ಶಾಲೆಯಲ್ಲಿ ಮಕ್ಕಳಿದ್ದಾರೆ. ಗ್ರಾಮಸ್ಥರು ಸಂಪೂರ್ಣವಾಗಿ ಸರ್ಕಾರ ಹಾಗೂ ಶಿಕ್ಷಕರಿಗೆ ಸಹಾಯ ಮಾಡಲು ಸಿದ್ದರಿದ್ದೇವೆ. ನಮ್ಮೂರ ಶಾಲೆಗೆ ಕಾಯಂ ಶಿಕ್ಷಕರನ್ನು ಕೊಡಲಿ. ಬಾಳಪ್ಪಎಸ್‌ಡಿಎಂಸಿ ಅಧ್ಯಕ್ಷ

— ಬಾಳಪ್ಪ ಎಸ್‌ಡಿಎಂಸಿ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net