ಹೆಜ್ಜೇನು ದಾಳಿಗೆ ಬಲಿ

Victim of a bee attack
Victim of a bee attack
Published on
ಮಂಚೇನಹಳ್ಳಿ: ತಾಲೂಕಿನ ಕಂಬತ್ತಹಳ್ಳಿಯಲ್ಲಿ ಹೆಜ್ಜೇನು ಕಚ್ಚಿ ಅದೇ ಗ್ರಾಮದ ಸನಾ ಉಲ್ಲಾ (48) ಎಂಬಾತ ಮೃತಪಟ್ಟಿದ್ದಾರೆ.
ಮನೆಯ ಸಮೀಪದ ಹುಣಸೆ ಮರದಲ್ಲಿದ್ದ ಹೆಜ್ಜೇನು ನೊಣಗಳ ಗೂಡನ್ನು ಕಿತ್ತು ಹಾಕಲು ಯತ್ನಿಸಿದಾಗ ಏಕಾಏಕಿ ನೊಣಗಳು ದಾಳಿ ನಡೆಸಿ ಕಚ್ಚಿವೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸನಾವುಲ್ಲಾ ಅವರನ್ನು ಮಂಚೇನಹಳ್ಳಿ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net