'ಉಲ್ಟಾ ಪಲ್ಟಾ' ಸಿನಿಮಾ ಖ್ಯಾತಿಯ ನಿರ್ದೇಶಕ, ಪತ್ರಕರ್ತ. ಲೇಖಕ ಎನ್​ಎಸ್​ ಶಂಕರ್ ಇನ್ನಿಲ್ಲ..NS Shankar

 N.S. Shankar passes away
N.S. Shankar passes away
Published on

ಪ್ರಮುಖ ಮುಖ್ಯಾಂಶಗಳು

  • 1997ರಲ್ಲಿ ತೆರೆಕಂಡ ‘ಉಲ್ಟಾ ಪಲ್ಟಾ' ಸಿನಿಮಾ ಖ್ಯಾತಿಯ ಎನ್ಎಸ್​ ಶಂಕರ್ ನಿಧನ.
  • ಕೆಲವು ದಿನಗಳ ಹಿಂದೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲೇಖಕ, ನಿರ್ದೇಶಕ.
  • ಸಿನಿಮಾ, ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರಿಂದ ಸಂತಾಪ ಸೂಚನೆ.
Ulta Palta director N.S. Shankar: 'ಉಲ್ಟಾ ಪಲ್ಟಾ' ಸಿನಿಮಾ ಖ್ಯಾತಿಯ ನಿರ್ದೇಶಕ ಪತ್ರಕರ್ತ ಹಾಗೂ ಲೇಖಕ   ಎನ್​ಎಸ್​ ಶಂಕರ್​  ಬೆಂಗಳೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. 
ಅವರ ನಿಧನ ವಾರ್ತೆಯು ಕನ್ನಡ ಸಿನಿಮಾ ರಂಗ, ಪತ್ರಿಕೋದ್ಯ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಸಿನಿಮಾ ರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಮಾಧ್ಯಮ ಕ್ಷೇತ್ರದ ಮಿತ್ರರು, ಸಾಹಿತ್ಯ ಲೋಕದ ಗಣ್ಯರು ಸೇರಿದಂತೆ ಹಲವರು  ಸಂತಾಪ ಸೂಚಿಸಿದ್ದಾರೆ
 'ಉಲ್ಟಾ ಪಲ್ಟಾ'  ಖ್ಯಾತಿಯ ಎನ್​ಎಸ್​ ಶಂಕರ್
ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ 'ಉಲ್ಟಾ ಪಲ್ಟಾ'  ಖ್ಯಾತಿಯ ಎನ್​ಎಸ್​ ಶಂಕರ್​ ಅವರು ಹಲವು ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತವಾಗದೆ 1997ರಲ್ಲಿ ‘ಉಲ್ಟಾ ಪಲ್ಟಾ’ ಸಿನಿಮಾ ನಿರ್ದೇಶಿಸಿದರು. ಆ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಹಿರಿಯ ಪತ್ರಕರ್ತ ಮತ್ತು ಪ್ರತಿಭಾವಂತ ಚಿತ್ರ ನಿರ್ದೇಶಕ ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದ ಎನ್‌.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು..ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಇನ್ನಷ್ಟು ಕಾಲ ನಮ್ಮ ಜೊತೆ ಇದ್ದು, ನಮಗೆಲ್ಲ ಮಾರ್ಗದರ್ಶನ ನೀಡಬೇಕಾಗಿತ್ತು.ಅವರ ಕುಟುಂಬವರ್ಗಕ್ಕೆ ಸಂತಾಪಗಳು, ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಎಕ್ಸ್​​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net