ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ(ಮಾಪಕರು, ಇತರ ಸಿಬ್ಬಂದಿ) ಮನೆ ಮನೆಗೆ ಭೇಟಿ ಕೊಟ್ಟು ದಾಖಲೆ ಪರಿಶೀಲನೆ ನಡೆಸಿ ಸೇವಾ ಸಿಂಧು ತಂತ್ರಾಂಶದಲ್ಲಿ ಇಂಧೀಕರಿಸುವ ಪ್ರಕ್ರಿಯೆಯನ್ನು ಕಳೆದ ಎರಡು ತಿಂಗಳಿಂದ ಮಾಡಿದ್ದಾರೆ. ಆದರಿಂದ 1.65 ಕೋಟಿ ಮನೆಗಳ ಪೈಕಿ 1.17 ಕೋಟಿ ಮನೆಗಳು ಪೂರ್ಣಗೊಂಡಿದ್ದು, ಶೇ.70.82 ಮುಗಿದಿದೆ. ಉಳಿಕೆ 48.25 ಲಕ್ಷ ಮನೆಗಳ ಪರಿಶೀಲನೆ ಬಾಕಿ ಉಳಿದಿದೆ. ಆದರಿಂದ ಸರ್ಕಾರ ಸೆ.30ರ ವರೆಗೆ ಅವಕಾಶ ಕಲ್ಪಿಸಿದೆ.