ಜನಗಣತಿ ಕಾರ್ಯದಲ್ಲಿ ವೇಮಗಲ್​ ಪಪಂ ಪ್ರಥಮ census

census ವೇಮಗಲ್​ನ ಡಾ.ಬಿ.ಆರ್​. ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ಜನಗಣತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​, ಸ್ಥಾಯಿ ಸಮಿತಿ ಅಧ್ಯ ವಿ.ಎಂ. ನಾಗೇಶ್​ ಇದ್ದರು.
census ವೇಮಗಲ್​ನ ಡಾ.ಬಿ.ಆರ್​. ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ಜನಗಣತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​, ಸ್ಥಾಯಿ ಸಮಿತಿ ಅಧ್ಯ ವಿ.ಎಂ. ನಾಗೇಶ್​ ಇದ್ದರು.
Published on
ವೇಮಗಲ್​: ಜಿಲ್ಲೆಯ ಜನಗಣತಿ ಕಾರ್ಯವು ಅತ್ಯಂತ ಮಹತ್ವದ ಟ್ಟದಲ್ಲಿದ್ದು, ಈ ನಿಟ್ಟಿನಲ್ಲಿ ವೇಮಗಲ್​& ಕುರುಗಲ್​ ಪಟ್ಟಣ ಪಂಚಾಯಿತಿಯು ಇಡೀ ಕೋಲಾರ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾ ಜನಗಣತಿ ಅಧಿಕಾರಿಹಾಗೂ ಅಪರ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ ಹರ್ಷ ವ್ಯಕ್ತಪಡಿಸಿದರು.
ವೇಮಗಲ್​ನ ಡಾ.ಬಿ.ಆರ್​. ಅಂಬೇಡ್ಕರ್​ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಗಣತಿ&2027ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಜನಗಣತಿ ಪ್ರಗತಿಯಲ್ಲಿ ಇಲ್ಲಿನ ಅಂಕಿ&ಅಂಶಗಳನ್ನು ಪರಿಶೀಲಿಸಿದಾಗ ಯಾವುದೇ ತಪ್ಪುಗಳಿಲ್ಲದೆ ನಿಖರವಾಗಿರುವುದು ಕಂಡುಬಂದಿದೆ. ತರಬೇತಿ ಅವಧಿಯಲ್ಲೂ ಸಹ ಇಲ್ಲಿನ ತಂಡವು ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದು, ಈಗ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಶ್ಲಾಸಿದರು. ಈ ಜನಗಣತಿಯಲ್ಲಿ ಗಣತಿದಾರರು ನೀಡುವ ಪ್ರತಿಯೊಂದು ಮಾಹಿತಿಯೂ ದೇಶದ ಪ್ರಗತಿಗೆ census ಪೂರಕವಾಗಲಿದೆ ಎಂದರು.
ಕೆಲಸದ ವೇಳೆ ತಾಂತ್ರಿಕ ಸಮಸ್ಯೆ ಎದುರಾದರೆ ತಣವೇ ತಾಂತ್ರಿಕ ಸಿಬ್ಬಂದಿ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಗಣತಿದಾರರ ಆರೋಗ್ಯದ ದೃಷ್ಟಿಯಿಂದ ಕ್ಯಾಪ್​ಗಳನ್ನು ವಿತರಿಸಲಾಯಿತು. ತಾಲೂಕು ವೈದ್ಯಾಧಿಕಾರಿ ನಾರಾಯಣಸ್ವಾಮಿ ಅವರು ಬಿಸಿಲಿನಿಂದ ಉಂಟಾಗುವ ರ್ನಿಜಲೀಕರಣ ತಡೆಗಟ್ಟಲು ಎಲ್ಲ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಒ.ಆರ್​.ಎಸ್​ ಪ್ಯಾಕೆಟ್​ಗಳನ್ನು ವಿತರಿಸಿ, ಆರೋಗ್ಯದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು, ಗಣತಿದಾರರು, ಮೇಲ್ವಿಚಾರಕರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net