ವೇಮಗಲ್​ ದೊಡ್ಡದ್ಯಾವರ ಜಾತ್ರೆ ವೈಭವ fair

ಕೋಲಾರ ತಾಲೂಕು ವೇಮಗಲ್​ ದೊಡ್ಡದ್ಯಾವರ ಜಾತ್ರೆ ವೈಭವ fair ವೇಮಗಲ್​ನಲ್ಲಿ ದೊಡ್ಡದ್ಯಾವರ ಜಾತ್ರೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್​, ದೇವಾಲಯದ ಟ್ರಸ್ಟ್​ ಮಂಡಳಿ ಯಜಮಾನ ಮೂರ್ತಿ, ಯುವ ಮುಖಂಡ ಪ್ರಕಾಶ್​, ಪಪಂ ಅಧ್ಯಕ್ಷೆ ಡಿ.ಅನುಷಾ, ಮುನಿರಾಜು, ತಹಸೀಲ್ದಾರ್​ ನಯನಾ, ಪ್ರಾಧಿಕಾರ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​ ಭಾಗಿಯಾಗಿದ್ದರು.
ಕೋಲಾರ ತಾಲೂಕು ವೇಮಗಲ್​ ದೊಡ್ಡದ್ಯಾವರ ಜಾತ್ರೆ ವೈಭವ fair ವೇಮಗಲ್​ನಲ್ಲಿ ದೊಡ್ಡದ್ಯಾವರ ಜಾತ್ರೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್​, ದೇವಾಲಯದ ಟ್ರಸ್ಟ್​ ಮಂಡಳಿ ಯಜಮಾನ ಮೂರ್ತಿ, ಯುವ ಮುಖಂಡ ಪ್ರಕಾಶ್​, ಪಪಂ ಅಧ್ಯಕ್ಷೆ ಡಿ.ಅನುಷಾ, ಮುನಿರಾಜು, ತಹಸೀಲ್ದಾರ್​ ನಯನಾ, ಪ್ರಾಧಿಕಾರ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​ ಭಾಗಿಯಾಗಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುರುಬ ಸಮುದಾಯದ ಆರಾಧ್ಯ ದೈವ
  • ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವುದೇ ಆಕರ್ಷಣೆ
ವೇಮಗಲ್: ಕೋಲಾರ ತಾಲೂಕು ವೇಮಗಲ್​ ಪಟ್ಟಣದಲ್ಲಿ ಕುರುಬ ಸಮುದಾಯದ fair ಆರಾಧ್ಯ ದೈವ ದೊಡ್ಡದ್ಯಾವರ ಜಾತ್ರೆ ವೈಭವದಿಂದ ನೆರವೇರಿತು.
ಗ್ರಾಮದಲ್ಲಿನ ಶ್ರೀ ಬೀರೇಶ್ವರ, ಶ್ರೀ ಸಿದ್ದೇದೇವರು, ಶ್ರೀ ಭತ್ತೇಶ್ವರ, ಶ್ರೀ ಬೆಳ್ಳೂರು ಬೇರೆಶ್ವರ, ಶ್ರೀ ಬಿಡದೀಶ್ವರಸ್ವಾಮಿ ದೇವಾಲಯದಲ್ಲಿ ದೊಡ್ಡಜಾತ್ರೆ ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದು, ದೊಡ್ಡ ಜಾತ್ರೆಯ ಕೇಂದ್ರಬಿಂದು ಬಸವ ಸಮೇತ ಗುರುಗಳನ್ನು ಆಹ್ವಾನಿಸಲಾಯಿತು. ಗಂಗಾಪೂಜೆ, ನವಗ್ರಹ ಪೂಜೆಯೂ ನೆರವೇರಿತು.
ಪಟ್ಟಣದಲ್ಲಿ ತಾತ್ಕಾಲಿಕವಾಗಿ ಬಿಡಾರ ಹೂಡಿರುವ ಕಡೆ ದೇವಾಲಯಕ್ಕೆ ಸಂಬಂಧಪಟ್ಟ ಕುರುಬ ಸಮುದಾಯದ ಮನೆತನದವರು ಕೂಟ ಸೇರಿ ದೊಡ್ಡಜಾತ್ರೆಗೆ ಸಿದ್ಧತೆ ನಡೆಸಿದ್ದರು. ಈ ದೇವಾಲಯ ವ್ಯಾಪ್ತಿಗೆ ಕೋಲಾರ ಸೇರಿ ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ನೆಲೆಸಿರುವ ಸುಮಾರು ಸಾವಿರಾರು ಮನೆಯವರು ಪಾಲ್ಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ನಾಗದೇವತೆಗಳಿಗೆ ತನಿ ಎರೆಯುವ ಕಾರ್ಯ, ಮನೆತನದ ಹಿರಿಯರಿಗೆ ಬಟ್ಟೆ ಇಡುವುದು, ವೀರಗಾರರ ಪೂಜೆ, ದೇವರಿಗೆ ರುದ್ರಾಭಿಷೇಕ ನಡೆಯಿತು.
ದೇವಾಲಯದಿಂದ ದೇವರನ್ನು ಮೆರವಣಿಗೆಯಲ್ಲಿ ಕುರುಬರಹಳ್ಳಿ ಗ್ರಾಮದ ಊರಿನಾಚೆಗೆ ತಂದು ಮೈದಾನದಲ್ಲಿ ಸಿದ್ಧವಾಗಿದ್ದ ವೇದಿಕೆ ಮೇಲೆ ಹೊಳೆಯಾಡುವ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು.
ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವ ಸಾಂಪ್ರದಾಯಿಕ ಆಚರಣೆ ಕಣ್ಮನ ಸೆಳೆಯಿತು. ಬಸವನ ಎದುರು ಮೈ ಮರೆತು ತೆಂಗಿನಕಾಯಿ ಹೊಡೆಸಿಕೊಳ್ಳುವ ವೀರಕುಮಾರರ ಪವಾಡ ನೋಡುಗರ ಗಮನ ಸೆಳೆಯಿತು.
ಎಂಎಲ್​ಸಿ ಅನಿಲ್​ ಕುಮಾರ್​, ಸಿಂಡಿಕೇಟ್​ ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮುರಳಿಗೌಡ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ವಿ.ಎಂ.ಮುನಿಯಪ್ಪ, ಪಪಂ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​, ಹಿರಿಯ ಮುಖಂಡ ಕುರುಬರಹಳ್ಳಿ ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಂ.ನಾಗೇಶ್​, ಉಪಾಧ್ಯಕ್ಷ ಸಿ.ಎಸ್​.ವೆಂಕಟೇಶ್​, ಸದಸ್ಯರಾದ ದೀಪಾ ವಿನಯ್​, ಶಿಲ್ಪಾ ಶಂಕರ್​, ಶಶಿಕಲಾ ನಾಗೇಶ್​, ಸುಜಾತಾ ಮುನಿರಾಜು, ರವಿ, ರಾಮು, ತಾಸೂಪ್​ ಖಾನ್​, ಸನಾವುಲ್ಲ, ನಟರಾಜ್​ ಪ್ರಾಧಿಕಾರ ಸದಸ್ಯ ಬಿ.ನಾಗರಾಜ್​, ಶಿವಕುಮಾರ್​, ರಾಜಸ್ವ ನೀರಿಕ್ಷಕ ಅಜಯ್​, ಪಪಂ ಸದಸ್ಯರು ಇದ್ದರು.
ಸರ್ಕಾರಿ ಜಾಗ ಮಂಜೂರು ಭರವಸೆ
ದೇವರು, ಸಂಸತಿ, ಧರ್ಮ, ಸಂಪ್ರದಾಯ ಆಚಾರ-&ವಿಚಾರಗಳನ್ನು ಮರೆಯದೇ ಮುಂದಿನ ಪೀಳಿಗೆಗೆ ತಲುಪಿಸಬೇಕು. ದೊಡ್ಡ ಜಾತ್ರಾ ಮಹೋತ್ಸವ ಮಾಡುತ್ತಿರುವುದು ಬಹಳ ನೆಮ್ಮದಿ ತರುತ್ತಿದೆ. ದೊಡ್ಡ ದ್ಯಾವರ ಜಾತ್ರೆ ಜಿಲ್ಲೆಯ ಸಾಂಸತಿಕ ವೈಭವ ಪ್ರತಿಬಿಂಬಿಸುತ್ತದೆ. ಇಂತಹ ಜಾತ್ರೆಗಳು ಸಮಾಜದಲ್ಲಿ ಏಕತೆ ಹಾಗೂ ಸಹಕಾರ ಹೆಚ್ಚಿಸುತ್ತವೆ. ಶ್ರೀ ಬೀರೇಶ್ವರಸ್ವಾಮಿ ದೇವಾಲಯ ಟ್ರಸ್ಟ್​ಗೆ ಕಾರ್ಯಕ್ರಮದ ವೇದಿಕೆ ನಿರ್ಮಿಸಿರುವ ಸರ್ಕಾರಿ ಜಾಗವನ್ನು ಮಂಜೂರು ಮಾಡಿ ಕೊಡಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್​ ಭರವಸೆ ನೀಡಿದರು.
ದೊಡ್ಡ ದ್ಯಾವರ ಜಾತ್ರೆ ನಮ್ಮ ನಾಡಿನ ಸಂಸತಿ ಮತ್ತು ಪರಂಪರೆಯ ಸಂಕೇತ. ಗ್ರಾಮೀಣ ಸಂಸತಿ ಮತ್ತು ಪರಂಪರೆಯನ್ನು ಉಳಿಸಲು ಇಂತಹ ಜಾತ್ರೆಗಳು ಮಹತ್ವದ ಪಾತ್ರವಹಿಸುತ್ತವೆ. ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಏಕತೆ ಮತ್ತು ಸಹೋದರತ್ವವನ್ನು ಬಲಪಡಿಸುತ್ತವೆ.
> ವಿ.ಆರ್​.ಸುದರ್ಶನ್​ ಮಾಜಿ ಸಭಾಪತಿ
ಶಾಸಕರಿಗೆ ಗ್ರಾಮಸ್ಥರ ಮನವಿ
ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಟ್ರಸ್ಟ್​ ಮಂಡಳಿ ಯಜಮಾನ ಮೂರ್ತಿ, ಯುವ ಮುಖಂಡ ಪ್ರಕಾಶ್​ ಹಾಗೂ ಇನ್ನಿತರ ಸದಸ್ಯರು ಮಾತನಾಡಿ, ವೇಮಗಲ್​ ಪಟ್ಟಣ ಬಹಳ ಅಭಿವೃದ್ಧಿಯಾಗುತ್ತಿದ್ದೆ. ದೇವರ ಕಾರ್ಯಕ್ರಮಗಳು ಹಾಗೂ ಇನ್ನಿತರ ಕುಲಭಾಂದವರ ಪೂಜಾ ಕಾರ್ಯಕ್ರಮಗಳನ್ನು ಮಾಡಲು ಬಹಳ ಕಷ್ಟವಾಗುತ್ತಿದೆ. ಈ ವೇದಿಕೆಯ 3 ಎಕರೆ ಸರ್ಕಾರಿ ಜಾಗವನ್ನು ದೇವಾಲಯದ ಟ್ರಸ್ಟ್​ ಹೆಸರಿಗೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಶಾಸಕ ಕೊತ್ತೂರು ಮಂಜುನಾಥ್​ ಅವರಿಗೆ ಮನವಿ ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು 3 ಎಕರೆ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net