ಆತ್ಮೋದ್ಧಾರದ ಪಥ ತೋರಿದ ವೇದವ್ಯಾಸರು

ಶಹಾಪುರ ನಗರದ ಹಿರಿಯ ನ್ಯಾಯವಾದಿ ಶ್ರೀನಿವಾಸರಾವ್ ಕುಲಕರ್ಣಿ ಕೊಳ್ಳೂರ ಅವರ ಮನೆಯಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳಿಂದ ಶ್ರೀರಾಮದೇವರ ಪೂಜೆ ನಡೆಯಿತು.
ಶಹಾಪುರ ನಗರದ ಹಿರಿಯ ನ್ಯಾಯವಾದಿ ಶ್ರೀನಿವಾಸರಾವ್ ಕುಲಕರ್ಣಿ ಕೊಳ್ಳೂರ ಅವರ ಮನೆಯಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳಿಂದ ಶ್ರೀರಾಮದೇವರ ಪೂಜೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸತ್ಯಾತ್ಮತೀರ್ಥ ಶ್ರೀಪಾದಂಗಳ ಅಭಿಮತ
  • ಶಹಾಪುರದಲ್ಲಿ ಪಾದಪೂಜೆ, ಮುದ್ರಾಧಾರಣೆ,
ಶಹಾಪುರ: ಲೋಕಕ್ಕೆಲ್ಲ ಜÁ್ಞನದ ಬೆಳಕು ನೀಡಿದ ಮಹಿಮಾನ್ವಿತರಾದ ಶ್ರೀ ವೇದವ್ಯಾಸರು ಭರತ ಖಂಡದಲ್ಲಿ ಅವತರಿಸಿದ ಮೇರು ಶಕ್ತಿ ಎಂದು ಉತ್ತರಾಽ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು.
ನಗರದ ಹಳಪೇಟೆಯ ಶ್ರೀ ರಾಯರ ಸನ್ನಿಽಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವೇದ ಜ್ಞಾನದಿಂದ ಮುಕುತಿ ಪಥದಲ್ಲಿ ನಡೆಯಲು ಮಾರ್ಗ ತೋರಿದವರು ಶ್ರೀ ವೇದವ್ಯಾಸರು. ಪೂಜ್ಯರಾದ ವೇದವ್ಯಾಸರ ಮೂಲಕ ವೇದಗಳ ವಿಭಾಗವಾಗಿ, ನಂತರ ವೇದಗಳಿಗೆ ಬ್ರಹ್ಮಸೂತ್ರ ಬರೆದವರು ಶ್ರೀ ಮದ್ವಾಚಾರ್ಯರು, ಬ್ರಹ್ಮಸೂತ್ರಗಳಿಗೆ ಟೀಕಾಕೃತ್ಪಾದರು ಭಾಷ್ಯ ಬರೆದ ಯತಿವರ್ಯರಾಗಿದ್ದು, ಹೀಗೆ ಪ್ರತಿಯೊಬ್ಬರ ಸ್ಮರಣೆ ಮಾಡುವುದು ಅತ್ಯವಶ್ಯ. ಅದರಲ್ಲಿಯೂ ಗುರು ಪೂರ್ಣಿಮೆ ಬಹಳ ಮಹತ್ವದ ದಿನವಾಗಿದೆ. ಗ್ರಂಥಗಳ ಅಧ್ಯಯನ, ಗುರುಗಳ ಸ್ಮರಣೆ ಮಾಡಿದರೆ ಎಲ್ಲವೂ ಪರಿಹಾರವಾಗಿ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ. ಪ್ರತಿಯೊಬ್ಬರೂ ಧರ್ಮದ ದಾರಿಯಲ್ಲಿ ನಡೆಯಬೇಕು ಎಂದರು.
ಈ ವೇಳೆ ಭಕ್ತರಿಂದ ಪಾದಪೂಜೆ ಸ್ವೀಕರಿಸಿದ ಗುರುಗಳು, ನಂತರ ಭಕ್ತರಿಗೆ ಮುದ್ರಾಧಾರಣೆ ಮಡಿದರು. ನಂತರ ಹಿರಿಯ ನ್ಯಾಯವಾದಿ ಶ್ರೀನಿವಾಸರಾವ ಕುಲಕರ್ಣಿ ಕೊಳ್ಳೂರ ಅವರ ಮನೆಯಲ್ಲಿ ಶ್ರೀರಾಮದೇವರ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಪೂಜ್ಯರಿಂದ ಮಂತ್ರಾಕ್ಷತೆ ಪಡೆದು ಕೃತ್ತಾರ್ಥರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net