ಚಿಂತಾಮಣಿಯಲ್ಲಿ ತಂಪೆರೆದ ವರುಣ

Varuna, who was tempered in Chintamani
Varuna, who was tempered in Chintamani
Published on
ಚಿಂತಾಮಣಿ: ಕಳೆದ ಕೆಲವು ದಿನಗಳಿಂದ ಸತತವಾಗಿ ಏರುತ್ತಿದ್ದ ತಾಪಮಾನದಿಂದ ಕಂಗೆಟ್ಟಿದ್ದ ನಗರದ ಜನತೆಗೆ ಬುಧವಾರ ಸುರಿದ ಮಳೆ ತಂಪೆರೆದಿದೆ.
ಕೆಲವು ವಾರಗಳಿಂದ 36ಲಿ.ನಿಂದ 38ಲಿ.ವರೆಗೆ ತಾಪಮಾನ ದಾಖಲಾಗಿತ್ತು. ನಿನ್ನೆ ಸುರಿದ ಮಳೆಯಿಂದ ಉಷ್ಣಾಂಶದಲ್ಲಿ ಇಳಿಕೆಯಾಗಿದ್ದು, ನಗರವಾಸಿಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಪಟ್ಟಣದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ನೀರು ನಿಂತು ಕೆಲ ಕಾಲ ಸಂಚಾರಕ್ಕೆ ಅಡಚಣೆಯಾಯಿತು. ಮಳೆ ಅಬ್ಬರಕ್ಕೆ ಬೈಕ್​ ಸವಾರರು ಅಂಗಡಿಗಳ ಆಸರೆ ಪಡೆದರು.
ನಗರ ಮತ್ತು ತಾಲೂಕಿನ ಸುತ್ತಮುತ್ತಲಿನ ಟೊಮ್ಯಾಟೊ, ಮಾವಿನ ಬೆಳೆಗಳಿಗೆ ಆಲಿಕಲ್ಲು ಮಳೆಯಿಂದ ಹಾನಿಯಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಳೆಯು ನಗರದ ಹೊರವಲಯದ ಒಣಭೂಮಿ ರೈತರಿಗೆ ಭೂಮಿ ಹದಗೊಳಿಸಲು ಅನುಕೂಲವಾಗಿದ್ದರೂ, ಕೊಯ್ಲಿಗೆ ಬಂದಿರುವ ತೋಟಗಾರಿಕೆ ಬೆಳೆಗಳ ಮೇಲೆ ಪರಿಣಾಮ ಬೀರರುತ್ತಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net