ಧಗೆಗೆ ತಂಪೆರೆದ ವರುಣ rain

ಧಗೆಗೆ ತಂಪೆರೆದ ವರುಣ rain
ಧಗೆಗೆ ತಂಪೆರೆದ ವರುಣ rain
Published on
ಶ್ರೀನಿವಾಸಪುರ: ಪಟ್ಟಣದಲ್ಲಿ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನಕ್ಕೆ ಶನಿವಾರ ವರುಣ ಕೃಪೆ ತೋರಿದ್ದಾನೆ. ಶನಿವಾರ ಸಂಜೆ ಸುರಿದ ಮಳೆಯಿಂದ ಜನರ ಮುಖದಲ್ಲಿ ಮಂದಹಾಸ ಮೂಡಿತು. ಪಟ್ಟಣದ ರಾಮಕೃಷ್ಣ ರಸ್ತೆ, ಚೈತ್ರಮಿಲ್ ಮುಂಭಾಗ ಚರಂಡಿ ತುಂಬಿ ಕೊಳಚೆನೀರು ರಸ್ತೆ ಮೇಲೆ ಹರಿಯಿತು. ಸಾಧಾರಣ ಮಳೆಗೆ ಈ ಪರಿಸ್ಥಿತಿಯಾದರೆ ಮುಂದಿನ ಮಳೆಗಾಲದ ಅವಧಿಯಲ್ಲಿ ಜೋರಾಗಿ ಬೀಳುವ ಮಳೆಗೆ ಪಟ್ಟಣದಲ್ಲಿ ಹಲವಾರು ಚರಂಡಿಗಳ ದುಸ್ಥಿತಿ ಊಹೆ ವಾಡಲು ಸಾಧ್ಯವಿಲ್ಲದಂತಾಯಿತು. ಪುರಸಭೆ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತವಾಗಿ ಪಟ್ಟಣದ ಎಲ್ಲ ವಾರ್ಡುಗಳಲ್ಲೂ ಚರಂಡಿಗಳನ್ನು ಶುಚಿ ಗೊಳಿಸಿ, ನಾಗರಿಕರಿಗೆ ಅನುಕೂಲ ವಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.rain
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net