ಆದರ್ಶ ಗ್ರಾಮ ಯೋಜನೆಯಡಿ ವಿವಿಧ ಕಾಮಗಾರಿ / TUBAGERE

ದೊಡ್ಡಬಳ್ಳಾಪುರ ತಾಲೂಕಿನತೂಬಗೆರೆ ಹೋಬಳಿ ಹಿರೇಮುದ್ದೇನಳ್ಳಿಯಲ್ಲಿ 20 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್​ ಭೂಮಿಪೂಜೆ ನೆರವೇರಿಸಿದರು. ದೇವನಹಳ್ಳಿ ತಾಲೂಕು ಬಿಜೆಪಿ ಟಕದ ಅಧ್ಯಕ್ಷ ಅಂಬರೀಶ್​ ಗೌಡ, ತೂಬಗೆರೆ ಹೋಬಳಿ ಬಿಜೆಪಿ ಟಕದ ಅಧ್ಯಕ್ಷ ಕೃಷ್ಣಪ್ಪ, ತುರುವನಹಳ್ಳಿ ವಾಸುದೇವ್​ ಇತರರು ಇದ್ದರು.
ದೊಡ್ಡಬಳ್ಳಾಪುರ ತಾಲೂಕಿನತೂಬಗೆರೆ ಹೋಬಳಿ ಹಿರೇಮುದ್ದೇನಳ್ಳಿಯಲ್ಲಿ 20 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್​ ಭೂಮಿಪೂಜೆ ನೆರವೇರಿಸಿದರು. ದೇವನಹಳ್ಳಿ ತಾಲೂಕು ಬಿಜೆಪಿ ಟಕದ ಅಧ್ಯಕ್ಷ ಅಂಬರೀಶ್​ ಗೌಡ, ತೂಬಗೆರೆ ಹೋಬಳಿ ಬಿಜೆಪಿ ಟಕದ ಅಧ್ಯಕ್ಷ ಕೃಷ್ಣಪ್ಪ, ತುರುವನಹಳ್ಳಿ ವಾಸುದೇವ್​ ಇತರರು ಇದ್ದರು.
Published on
ತೂಬಗೆರೆ : ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಹಲವಾರು ಮೂಲ ಸೌಕರ್ಯಗಳನ್ನು ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿದ್ದೇವೆ. ಇದು ರಾಜ್ಯ ಸರ್ಕಾರದ್ದಲ್ಲ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಯವರ ಯೋಜನೆಗಳಾಗಿವೆ ಎಂದು ಸಂಸದ ಡಾ.ಕೆ.ಸುಧಾಕರ್​ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಹಿರೇಮುದ್ದೇನಹಳ್ಳಿಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಸೋಲಾರ್​ ಲೈಟ್​, ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈಗ ನಾನು ಚಾಲನೆ ನೀಡಿರುವ ಕಾಮಗಾರಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುತ್ತಿದ್ದೇವೆ. ಇದನ್ನು ಎಲ್ಲರು ಗಮನದಲ್ಲಿಟ್ಟುಕೊಳ್ಳಬೇಕು. ಹಳ್ಳಿಗಳಲ್ಲಿ ಸ್ವಚ್ಛತೆ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಧಾನ ಮಂತ್ರಿಯವರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇನ್ನು ಗುತ್ತಿಗೆದಾರರೇನಾದರೂ ಕಳಪೆ ಕಾಮಗಾರಿ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಬಿಜೆಪಿ ಟಕದ ಕಾರ್ಯದರ್ಶಿ ಪ್ರತಾಪ್​ ಮಾತನಾಡಿ, ಗ್ರಾಮಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಪ್ರಧಾನಮಂತ್ರಿಯವರ ಉದ್ದೇಶ. ಹಾಗಾಗಿ ಆದರ್ಶ ಗ್ರಾಮ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್​ ಲೈಟ್​, ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇನ್ನು ಮುಂದೆ ವಿವಿಧ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದರು.
ಸಂಸದ ಗ್ರಾಮಕ್ಕೆ ಬರುತ್ತಿದ್ದಂತೆ ಸ್ಥಳಿಯರು, ನಮಗೆ ರಸ್ತೆ ಮಾಡಿಕೊಡಿ ಸ್ವಾಮಿ, ರಸ್ತೆ ಇಲ್ಲದ ಕಾರಣ ಓಡಾಡಲು ಆಗುತ್ತಿಲ್ಲ. ಗರ್ಭಿಣಿಯರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುವುದಿಲ್ಲ. ವಿದ್ಯಾರ್ಥಿಗಳು ನಿಗದಿತ ಅವಧಿಗೆ ಶಾಲೆಗೆ ಹೋಗಲಾಗದೆ ಪರದಾಡುವಂತಾಗಿದೆ. ಜನಪ್ರತಿನಿಧಿಗಳು ಬರುತ್ತಾರೆ, ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಹಾಗಾಗಿ ತಾವಾದರೂ ಕೆಲಸ ಮಾಡಿಕೊಡಿ ಮಾಡಿಕೊಡಿ ಸ್ವಾಮಿ ಎಂದು ಮನವಿ ಪತ್ರ ನೀಡಿ ಕೇಳಿಕೊಂಡರು. ತೂಬಗೆರೆ ಪಿಡಿಒ ವೆಂಕಟೇಶ್​, ಗ್ರಾಪಂ ಸದಸ್ಯರಾದ ನಾಗೇಶ್​, ರಾಜಕುಮಾರ್​, ತೂಬಗೆರೆ ಹೋಬಳಿ ಟಕದ ಮಾಜಿ ಅಧ್ಯಕ್ಷ ಗಂಗರಾಜು ಸೇರಿದಂತೆ ಸ್ಥಳಿಯ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net