ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು / DODABALLAPUR

ಸರ್ಕಾರದಿಂದ ಪರವಾನಗಿ ಪಡೆದ ಭೂ ಮಾಪಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಭೂ ಮಾಪಕರಾದ ರಾಜಶೇಖರ್​, ಕಾಂತರಾಜು, ಮಂಜುನಾಥ, ಜಯಶಂಕರ್​, ಪ್ರಸಾದ್​ , ಗುರುರಾಜು, ರೈತ ಕೆಸ್ತೂರು ರಮೇಶ್​, ನರಸಿಂಹಮೂರ್ತಿ, ವಾಸು ಮತ್ತಿತ್ತರರು ಇದ್ದರು.
ಸರ್ಕಾರದಿಂದ ಪರವಾನಗಿ ಪಡೆದ ಭೂ ಮಾಪಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಭೂ ಮಾಪಕರಾದ ರಾಜಶೇಖರ್​, ಕಾಂತರಾಜು, ಮಂಜುನಾಥ, ಜಯಶಂಕರ್​, ಪ್ರಸಾದ್​ , ಗುರುರಾಜು, ರೈತ ಕೆಸ್ತೂರು ರಮೇಶ್​, ನರಸಿಂಹಮೂರ್ತಿ, ವಾಸು ಮತ್ತಿತ್ತರರು ಇದ್ದರು.
Published on
ದೊಡ್ಡಬಳ್ಳಾಪುರ : ಸೇವೆ ಕಾಯಂ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರು ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಭೂ ಮಾಪಕ ರಾಜಶೇಖರ್​ ಮಾತನಾಡಿ, ಫೆಬ್ರವರಿ 20 ರಿಂದ ಅರ್ನಿದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದೇವೆ. ಈವರೆಗೂ ಸರ್ಕಾರದ ಸಚಿವರಾಗಲಿ, ಅಧಿಕಾರಿಗಳಾಗಲಿ ಸೌಜನ್ಯಕ್ಕೂ ನಮ್ಮನ್ನು ಕರೆದು ಮಾತನಾಡಿಲ್ಲ. ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ತಾವೇ ಅಧಿಕಾರದಲ್ಲಿದ್ದರೂ ಸಮಸ್ಯೆಗಳನ್ನು ಕೇಳುತ್ತಿಲ್ಲ. ಕಂದಾಯ ಸಚಿವ ಕೃಷ್ಣಬೈರೇಗೌಡರು ನೀಡಿದ್ದ ಭರಸವೆ ಹುಸಿಯಾಗಿದೆ. ತಾಲೂಕಿನಲ್ಲಿ 38 ಮಂದಿ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರಿದ್ದೇವೆ. ನಮಗೆ ಯಾವುದೇ ಕೆಲಸದ ಭದ್ರತೆ ಇಲ್ಲ. ಜೀವನ ನಿರ್ವಹಣೆ ಸಂಕಷ್ಟಕರವಾಗಿದೆ. ಇಲಾಖೆ ಸೂಚಿಸಿದ ಎಲ್ಲ ಕೆಲಸಗಳನ್ನು ಮಾಡುತ್ತೇವೆ. ಆದರೆ ನಮಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದರು.
ಭೂಮಾಪಕ ಕಾಂತರಾಜು ಮಾತನಾಡಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೈಕೋರ್ಟ್​ ಕೂಡ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರದ ಪರವಾನಗಿ ಪಡೆದು 2002ರಿಂದಲೂ ಸೇವೆ ಸಲ್ಲಿಸುತ್ತಿರುವ 6 ಸಾವಿರಕ್ಕೂ ಹೆಚ್ಚು ಭೂ ಮಾಪಕರಿಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿ ಭೂ ಮಾಪಕರಂತೆ ಸಮಾನ ಕೆಲಸ ಮಾಡುತ್ತಿರುವ ನಮಗೆ ಸಮಾನ ವೇತನ ನೀಡಬೇಕು. ಜತೆಗೆ ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಕೆಲಸಕ್ಕೆ ಹಿನ್ನಡೆ : ಜಮೀನು ಸರ್ವೇಗೆ ಬೇಸಿಗೆ ಸೂಕ್ತ ಕಾಲ. ಉಳಿದ ಸಮಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೇಸಿಗೆಯಲ್ಲಿ ಒಂದಷ್ಟು ಬಿಡುವಿನಲ್ಲಿ ಇರುತ್ತಾರೆ. ಭೂಮಿ ಅಳತೆ, ಪರಿವರ್ತನೆಗೆ ಇದು ಒಳ್ಳೆಯ ಸಮಯ. ಇಂತಹ ವೇಳೆಯಲ್ಲಿಯೇ ಭೂಮಾಪಕರು ಸಿಗುತ್ತಿಲ್ಲ. ಇದು ಕೃಷಿ ಜತೆಗೆ ಇತರೆ ವಲಯಗಳಿಗೂ ಪೆಟ್ಟು ಕೊಟ್ಟಿದೆ. ಇವತ್ತು, ನಾಳೆ ಎನ್ನುತ್ತಾ ಸಮಯ ಮುಂದೂಡುವುದು ಸರಿಯಲ್ಲ. ಖಾಸಗಿಯವರನ್ನು ಕರೆದು ಸಮೀೆ ಮಾಡಿಸಲು ಆಗುವುದಿಲ್ಲ ಎಂದು ರೈತ ಕೆಸ್ತೂರು ರಮೇಶ್​ ಬೇಸರ ವ್ಯಕ್ತಪಡಿಸಿದರು. ಪ್ರತಿಯೊಂದು ಕೆಲಸಕ್ಕೂ ಭೂಮಾಪಕರ ಅಗತ್ಯ ಇದೆ. ಅವರು ಜಾಗ ಗುರುತಿಸಿದರೆ ಮುಂದಿನ ಕಾರ್ಯ ನಡೆಯುತ್ತದೆ. ಇಲ್ಲದಿದ್ದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಸರ್ಕಾರ ಇದನ್ನು ಅರಿತು ಒಂದು ನಿರ್ಧಾರ ಕೈಗೊಳ್ಳಬೇಕು. ನಮ್ಮ ತಾಲ್ಲೂಕಿನಲ್ಲಿ ಜಮೀನಿನ ಹದ್ದುಬಸ್ತು, ಪೋಡಿ, 11 ಇ, ಭೂ ಪರಿವರ್ತನೆ ಒಳಗೊಂಡಂತೆ ಒಟ್ಟು 9 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ. ಭೂ ಮಾಪಕರು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದ್ದು, ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಹ ತೊಡಕಾಗಿದೆ. ಪ್ರತಿಯೊಂದು ಕೆಲಸಕ್ಕೆ 11 ಇ ಅನಿವಾರ್ಯವಾಗಿದೆ. ಹೀಗಾಗಿ ರೈತರ ಯಾವುದೇ ಕೆಲಸ ಸಕಾಲಕ್ಕೆ ಆಗುತ್ತಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net