ಕೇವಲ ಮಾನಸಿಕ ಕಿರುಕುಳ ಮಾತ್ರವಲ್ಲದೆ, ಆರ್ಥಿಕವಾಗಿಯೂ ಅಧಿಕಾರಿಯನ್ನು ಹೈರಾಣಾಗಿಸಲಾಗಿದೆ. "ದಿನಚರಿ (Diary) ನೀಡಿಲ್ಲ" ಎಂಬ ಕಾರಣವೊಡ್ಡಿ ಕಳೆದ ಎರಡು ತಿಂಗಳಿನಿಂದ ಅವರ ವೇತನವನ್ನು ತಡೆಹಿಡಿಯಲಾಗಿದೆ. "ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ನಾನೂ ಕೂಡ ಅನಾರೋಗ್ಯ ಪೀಡಿತನಾಗಿದ್ದೇನೆ. ವೇತನವಿಲ್ಲದೆ ಜೀವನ ಸಾಗಿಸುವುದು ಅಸಾಧ್ಯವಾಗಿದೆ. ಈ ಹಿಂದೆಯೂ ಇದೇ ರೀತಿ ವೇತನ ತಡೆಹಿಡಿದು ಸತಾಯಿಸಲಾಗಿತ್ತು" ಎಂದು ಯೋಗೇಶ ಪತ್ರದಲ್ಲಿ ವಿವರಿಸಿದ್ದಾರೆ. ಯೋಗೇಶ ಕುರಹಟ್ಟಿ ಅವರ ಈ ನಡೆ ಈಗ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.