

ಪ್ರಮುಖ ಮುಖ್ಯಾಂಶಗಳು
ಸೇವಾ ಸಿಂಧು ತಂತ್ರಾಂಶದಲ್ಲಿನ ತಾಂತ್ರಿಕ ಕಾರಣಗಳಿಂದಾಗಿ ಆನ್‌ಲೈನ್ ಮೂಲಕ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಡೌನ್‌ಲೋಡ್ ಮಾಡಿ ಆಯ್ಕೆ ಸಮಿತಿ ಮುಂದೆ ಮಂಡಿಸಲು ಸಮಸ್ಯೆಯುಂಟಾಗಿದ್ದು, ನಂತರ ಸಮಸ್ಯೆ ನಿವಾರಿಸಲಾಗಿದೆ. ಪ್ರಸ್ತುತ ಫಲಾನುಭವಿಗಳ ಪಟ್ಟಿ ಡೌನ್‌ಲೋಡ್ ಮಾಡಿ ಆಯಾ ವಿಧಾನ ಸಭೆ ಕ್ಷೇತ್ರದ ಶಾಸಕರ ಮುಂದೆ ಮಂಡಿಸಲಾಗುತ್ತಿದೆ. ಮಾರ್ಚ್ ಅಂತ್ಯದ ವೇಳೆ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ.