

ದೇವನಹಳ್ಳಿ :
ಶ್ರೀ ಮಹರ್ಷಿ ವಾಲ್ಮೀಕಿ ಅವರು ಭೂತ, ಭವಿಷ್ಯತ್, ವರ್ತಮಾನದ ಆಗುಹೋಗುಗಳ ಬಗ್ಗೆ ಅರಿತ ಮಹಾನ್ ಚೇತನ. ಅಂತಹವರ ಹೆಸರಿನಲ್ಲಿ ಸಮುದಾಯಭವನ ನಿಮಾರ್ಣದಿಂದ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕಸಬಾ ಹೋಬಳಿ ಚಿಕ್ಕಸಣ್ಣೆ ಬಂಡರಾಮನಹಳ್ಳಿಯಲ್ಲಿ ಅಣ್ಣೇಶ್ವರ ಗ್ರಾಪಂನಿಂದ 1.6 ಕೋಟಿ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿಮಾರ್ಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸ್ವಾಮಿಗಳ ಸುದೀರ್ಘ ಹೋರಾಟದಿಂದ ಎಸ್.ಟಿ ಸಮುದಾಯಕ್ಕೆ ದೊರೆಯಬೇಕಾದ ಮೀಸಲಾತಿಯನ್ನು ಸರ್ಕಾರ ಶ್ರೀ ನೀಡಲಿದೆ ಎಂದು ಭರವಸೆ ನೀಡಿದರು.
ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, 11 ತಿಂಗಳಲ್ಲಿ ವಾಲ್ಮೀಕಿ ಭವನ ಕಾಮಗಾರಿ ಮುಗಿಸಿ ಉದ್ಘಾಟಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಬಿಜೆಪಿ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿದ್ದರು ಎಂದರು.
ಅಣ್ಣೇಶ್ವರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಂಗರಾಜು, ಬಯಪ ಮಾಜಿ ಸದಸ್ಯ ಪ್ರಸನ್ನಕುಮಾರ್, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ನಾಗೇಶ್, ಮುಖಂಡರಾದ ಯರ್ತಿಗಾನಹಳ್ಳಿ ಶಿವಣ್ಣ, ಮುಕುಂದ ಇದ್ದರು.