ವಚನ ಸಾಹಿತ್ಯ ಕನ್ನಡದ ಅಮೂಲ್ಯ ನಿಧಿ

ವಿಜಯಪುರದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ದತ್ತಿ ಸ್ಮರಣೆ ಕಾರ್ಯಕ್ರಮ ನಡೆಯಿತು. ನಾರಾಯಣಪ್ಪ ಕುರುಬರ, ಎಸ್.ಎಂ. ಶೇಖ, ಜಂಬುನಾಥ ಕಂಚ್ಯಾಣಿ ಮತ್ತಿತರರಿದ್ದಾರೆ.
ವಿಜಯಪುರದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ದತ್ತಿ ಸ್ಮರಣೆ ಕಾರ್ಯಕ್ರಮ ನಡೆಯಿತು. ನಾರಾಯಣಪ್ಪ ಕುರುಬರ, ಎಸ್.ಎಂ. ಶೇಖ, ಜಂಬುನಾಥ ಕಂಚ್ಯಾಣಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಎಸ್.ಎಂ. ಶೇಖ ಹೇಳಿಕೆ
  • ಲಿಂ. ಅಮರಪ್ಪ ಕುರುಬರ ಸ್ಮರಣಾರ್ಥ ದತ್ತಿ ಸ್ಮರಣೆ
ವಿಜಯಪುರ: ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುವ ಆತ್ಮ ಪ್ರಜ್ಞೆಗೆ ಬಸವ ಪ್ರಜ್ಞೆ ಎನ್ನುವರು. ಇದು ವಚನ ಸಾಹಿತ್ಯದಲ್ಲಿ ಅಮೂಲ್ಯ ನಿಧಿಯಾಗಿ ಹರಡಿಕೊಂಡಿದೆ. ಈ ಸಂಪತ್ತಿನಿಂದ ಮನುಷ್ಯ ತನ್ನ ಬದುಕನ್ನು ಶ್ರೀಮಂತಗೊಳಿಸಿಕೊಂಡು ಪುನೀತನಾಗಬೇಕು ಎಂದು ಎಸ್.ಎಂ. ಶೇಖ ಹೇಳಿದರು.
ನಗರದ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಲಿಂ. ಅಮರಪ್ಪ ಕುರುಬರ ಸ್ಮರಣಾರ್ಥ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಮಕ್ಕಳನ್ನು ಸಚ್ಚಾರಿತ್ರೃವಂತರನ್ನಾಗಿ ಮಾಡುವಲ್ಲಿ ತಾಯಿ-ತಂದೆ ಪಾತ್ರ ಹೆಚ್ಚಿರುತ್ತದೆ ಎಂದು ತಿಳಿಸಿದರು.
ದತ್ತಿ ದಾಸೋಹಿ ನಾರಾಯಣಪ್ಪ ಕುರುಬರ ಮಾತನಾಡಿ, ಹೆತ್ತವರ ಸ್ಮರಣೆ ಮಾಡಲು ಅವಕಾಶ ಕಲ್ಪಿಸಿದ ಶರಣ ಸಾಹಿತ್ಯ ಪರಿಷತ್‌ಗೆ ಕೃತಜ್ಞತೆ ಸಲ್ಲಿಸಿದರು. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮ.ಗು. ಯಾದವಾಡ ವಂದಿಸಿದರು.
ಬಿ.ಎಂ. ಪಾಟೀಲ, ಬಿ.ಟಿ. ಈಶ್ವರಗೊಂಡ, ಜಗದೀಶ ಪಟ್ಟಣಶೆಟ್ಟಿ, ಎಸ್.ವೈ. ಗದಗ, ಬಸವರಾಜ ಪಟ್ಟಣಶೆಟ್ಟಿ, ದೇವೇಂದ್ರ ಡಂಬಳ, ಎಸ್.ಬಿ. ದೊಡಮನಿ, ಲಕ್ಷ್ಮೀ ಕುರುಬರ, ಶಕುಂತಲಾ ಮೋಸಲಗಿ, ಕಮಲಾ ಮುರಾಳ, ಎಲ್.ಪಿ. ಬಿರಾದಾರ, ಮಾಧವ ಗುಡಿ, ಅಶೋಕ ಹಂಚಲಿ, ಬಿ.ಸಿ. ಸಾರವಾಡ, ಬಸವರಾಜ ಗೋಟ್ಯಾಳ, ಆರ್.ಎಸ್. ಬಿರಾದಾರ, ಶಿವಪ್ಪ ಶಿವಣಗಿ, ಸುಭಾಷ ಬೆಟಗೇರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net