ಕಾಯಿಲೆಗಳಿಂದ ದೂರವಿಡಲು ಲಸಿಕೆ ಅಗತ್ಯ

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಕಾರ್ಯಕ್ರಮದಲ್ಲಿ ಡಾ.ವಿನೋದ್​ಕುಮಾರ್​ ಮಗುವಿಗೆ ಲಸಿಕೆ ಹಾಕಿದರು. ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಪಿ.ಎ.ಶಶಿಕಲಾ, ಜೆ.ವಿ.ಹರ್ಷಿಯಾಭಾನು ಇದ್ದರು.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಕಾರ್ಯಕ್ರಮದಲ್ಲಿ ಡಾ.ವಿನೋದ್​ಕುಮಾರ್​ ಮಗುವಿಗೆ ಲಸಿಕೆ ಹಾಕಿದರು. ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಪಿ.ಎ.ಶಶಿಕಲಾ, ಜೆ.ವಿ.ಹರ್ಷಿಯಾಭಾನು ಇದ್ದರು.
Published on
ಪಾತಪಾಳ್ಯ: ನವಜಾತ ಶಿಶುಗಳಿಂದ ಒಂದು ವರ್ಷದವರೆಗಿನ ಮಕ್ಕಳಿಗೆ ಆಸ್ಪತ್ರೆಯಲ್ಲಿ ನೀಡುವ ಎಲ್ಲ ಲಸಿಕೆ ಮಾಡಿಸಬೇಕು ಎಂದು ವೈದ್ಯಾಧಿಕಾರಿ ಡಾ.ವಿನೋದ್​ ಕುಮಾರ್​ ತಿಳಿಸಿದರು.
ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಅಪಾಯಕಾರಿ ಕಾಯಿಲೆ ಬಾರದಂತೆ ತಡೆಯಲು ವ್ಯಾಕ್ಸಿನೇಷನ್​ ಅಗತ್ಯ. ನಾಯಿ ಕೆಮ್ಮು, ದಡಾರ, ಹುಬ್​ ಮೆನಿಂಜೈಟಿಸ್​, ನ್ಯಿಮೋಕೊಕಲ್​ ಕಾಯಿಲೆ, ಹೆಪಟೈಟಿಸ್​ ಹಾಗೂ ಪೋಲಿಯೊದಂತ ಗಂಭೀರ ಕಾಯಿಲೆಗಳಿಂದ ದೂರವಿಡಲು ಲಸಿಕೆ ಮಾಡಿಸಿ, ಹುಟ್ಟಿದ 6 ತಿಂಗಳ ತನಕ ತಾಯಿಹಾಲು ಬಿಟ್ಟು ಬೇರೇನೂ ನೀಡಬಾರದು, ನಂತರ ಪೌಷ್ಟಿಕ ಆಹಾರ ತಯಾರಿಸಿ ಕೊಡಬಹುದು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಪಿ.ಎ.ಶಶಿಕಲಾ ಮಾತನಾಡಿ, ಮಕ್ಕಳು ಬೆಳೆಯುವ ಹಂತದಲ್ಲಿ ಸೋಂಕು ಹಾಗೂ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ರೋಗಗಳು ರೋಗ ನಿರೋಧಕ ಶಕ್ತಿಯನ್ನೇ ಸೋಲಿಸುತ್ತದೆ. ಆಗ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಜೆ.ವಿ.ಹರ್ಷಿಯಾಭಾನು, ಎಫ್​ಡಿಎ ಸುಧಾ, ಶ್ರಶೂಷಕಿ ಉಮಾದೇವಿ, ಆರೋಗ್ಯ ಸಹಾಯಕಿ ವೈ.ವಿ.ಅರುಣ, ರವಣಮ್ಮ, ಪ್ರಯೋಗ ತಜ್ಞೆ ಡಿ.ಆರ್​.ಕಾಂಚನಾ, ಅರುಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net