ಜಾನುವಾರುಗಳಿಗೆ ಲಸಿಕೆ ಹಾಕಿಸಿ

Vaccinate livestock.
Vaccinate livestock.
Published on
ಚಿಂತಾಮಣಿ: ತಾಲೂಕಿನಾದ್ಯಂತ ಜಾನವಾರು ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಚಿಂತಾಮಣಿ ಪಶು ವೈದ್ಯಕಿಯ ಇಲಾಖೆಯಿಂದ ಹಮ್ಮಿಕೊಂಡಿದ್ದ ನಿರಂತರ ಲಸಿಕೆ ಅಭಿಯಾನದಲ್ಲಿ ರೋಗ ಹತೋಟಿಗೆ ಬಂದಿದ್ದು 8 ಸುತ್ತುಗಳಲ್ಲಿ ಲಸಿಕೆ ನೀಡಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ ಎಂದು ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ವೀರರಾಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ 35,044 ಹಸು&ಎತ್ತುಗಳು ಮತ್ತು 5,045 ಎಮ್ಮೆಗಳು ಸೇರಿ ಒಟ್ಟು 40,089 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ರ ಸಂಗಳ ಸಹಯೋಗದೊಂದಿಗೆ ಇಲಾಖೆ ಈ ಕಾರ್ಯ ನಿರ್ವಹಿಸುತ್ತಿದೆ. 2025ಕ್ಕೆ ಮುಕ್ತಾಯವಾದ 8ನೇ ಸುತ್ತಿನಲ್ಲಿ ಶೇ.100 ರಷ್ಟು ಗುರಿ ಸಾಧಿಸಲಾಗಿದೆ ಎಂದರು.
ಕಾಲುಬಾಯಿ ರೋಗದಿಂದ ಹಾಲು ಉತ್ಪಾದನೆ ಕುಸಿತ, ಜಾನುವಾರು ಸಾವು, ದುಡಿಯುವ ಸಾಮರ್ಥ್ಯ ಕುಂಠಿತ ಸೇರಿ ರೈತರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 2019ರಲ್ಲಿ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಆರಂಭಿಸಲಾಯಿತು, 2020ರಿಂದ ಜಾರಿಯಲ್ಲಿರುವ ಈ ಯೋಜನೆಯಡಿ 6 ತಿಂಗಳಿಗೊಮ್ಮೆ ಲಸಿಕೆ ನೀಡಲಾಗುತ್ತಿದೆ. 2026ರಿಂದ ಏಪ್ರಿಲ್​ನಿಂದ 9ನೇ ಸುತ್ತಿನ ಲಸಿಕೆ ಅಭಿಯಾನ ಆರಂಭವಾಗಲಿದೆ ಎಂದರು.
ಗರ್ಭಕಟ್ಟಿದ ಮತ್ತು ರೋಗಗ್ರಸ್ತ ಜಾನುವಾರುಗಳಿಗೆ ಲಸಿಕೆ ನೀಡುವುದಿಲ್ಲ. ಲಸಿಕೆ ಹಾಕಿಸದ ರೈತರು ಸಮೀಪದ ಪಶು ಚಿಕಿತ್ಸಾ ಕೇಂದ್ರ ಅಥವಾ ಹಾಲು ಉತ್ಪಾದಕ ಸಹಕಾರ ಸಂಗಳನ್ನು ಸಂಪರ್ಕಿಸಬಹುದು. 6 ತಿಂಗಳು ಮೇಲ್ಪಟ್ಟ ಜಾನುವಾರು ರೋಗದಿಂದ ಮೃತಪಟ್ಟರೆ ವಿಮೆ ಇಲ್ಲದಿದ್ದಲ್ಲಿ ಸರ್ಕಾರದಿಂದ ಪರಿಹಾರ ದೊರೆಯುತ್ತದೆ. ಮರಣೋತ್ತರ ಪರೀೆ ವರದಿ ಆಧಾರದಲ್ಲಿ ಇಲಾಖೆ ಪರಿಹಾರ ನೀಡಲಿದೆ.
ಚಿಂತಾಮಣಿ ತಾಲೂಕನ್ನು ಕಾಲುಬಾಯಿ ರೋಗ ಮುಕ್ತ ವಲಯವನ್ನಾಗಿ ಷಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಯನದ ಬಳಿಕ ಯೋಜನೆಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸುವುದು ಇಲಾಖೆ ಗುರಿ ಡಾ.ವೀರರಾಜು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net