ವಿಷಜಂತುಗಳ ಕೊಂಪೆಯಾದ ಖಾಲಿ ನಿವೇಶನಗಳು

Vacant plots that have become a haven for venomous creatures.
Vacant plots that have become a haven for venomous creatures.
Published on
ಗೌರಿಬಿದನೂರು : ನಗರದ 2ನೇ ವಾರ್ಡ್​ನ ವಿದ್ಯಾನಗರ ಗಣೇಶ ದೇವಸ್ಥಾನದ ಹಿಂಭಾಗದ ಖಾಸಗಿ ನಿವೇಶನಗಳು ವಿಷಜಂತುಗಳ ಕೊಂಪೆಯಾಗಿದ್ದು, ಸ್ಥಳಿಯ ವಾಸಿಗಳು ಆತಂಕದಿಂದ ಜೀವಿಸುವಂತಾಗಿದೆ.
ಖಾಲಿ ನಿವೇಶನಗಳಲ್ಲಿ ಸೀಮೆ ಜಾಲಿ ಗಿಡಗಳು ಹಾಗೂ ಇತರ ಗಿಡ&ಗಂಟಿಗಳು ಬೆಳೆದಿವೆ. ಇದರಿಂದ ಪದೇ ಪದೆ ಹಾವುಗಳು ಕಾಣಿಸಿಕೊಳ್ಳುತ್ತಿವೆ. ನಿತ್ಯ ಸಂಜೆಯಾದರೆ ಸಾಕು ಪ್ರತಿ ಮನೆಗಳಲ್ಲಿ ಸೊಳ್ಳೆಗಳ ಸಂಗೀತ ಕಛೇರಿ ಪ್ರಾರಂಭವಾಗುತ್ತದೆ. ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳನ್ನು ನಿವೇಶನ ಮಾಲೀಕರೇ ತೆರವುಗೊಳಿಸಬೇಕು. ನೆರೆ&ಹೊರೆಯವರಿಗೆ ತೊಂದರೆಯಾಗದಂತೆ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ನಗರಸಭೆ ಪದೇ ಪದೆ ಎಚ್ಚರಿಸುತ್ತಲೇ ಬರುತ್ತಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಿವೇಶನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಸ್ಥಳಿಯ ವಾಸಿಗಳು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net