ವಾಸವಿ ದೇವಿಗೆ ಉಯ್ಯಾಲೋತ್ಸವ Uyalotsava

ವಾಸವಿ ದೇವಿಗೆ ಉಯ್ಯಾಲೋತ್ಸವ Uyalotsava
ವಾಸವಿ ದೇವಿಗೆ ಉಯ್ಯಾಲೋತ್ಸವ Uyalotsava
Published on
ಶಿಡ್ಲಘಟ್ಟ: ನಗರದ ವಾಸವಿ ರಸ್ತೆಯ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ವಾಸವಿ ಜಯಂತಿ ಪ್ರಯುಕ್ತ ಆರ್ಯ ವೈಶ್ಯ ಮಂಡಳಿಯಿಂದ ಪೂಜೆ ಮಾಡಲಾಯಿತು. Uyalotsava
ಬೆಳಗ್ಗೆಯಿಂದ ಪೂಜಾ ವಿಧಿಗಳಲ್ಲಿ ಅಗ್ರೋದಕಾಹರಣ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ದೇವಿ ಸಪ್ತಶತಿ ಪಾರಾಯಣ, ಋತ್ವಿಕ್​ವರುಣ, ಕಳಶಸ್ಥಾಪನೆ, ವಾಸವಿ ನವಗ್ರಹ ಕಲ್ಪೋಕ್ತ ಹೋಮಾದಿಗಳು, ಪೂರ್ಣಾಹುತಿ, ಮಹಾನೈವೇದ್ಯ ಅರ್ಪಿಸಲಾಯಿತು.
ದೇವಾಲಯದಲ್ಲಿರುವ ಗಣಪತಿ, ಕನ್ಯಕಾಪರಮೇಶ್ವರಿ, ವಾಸವಿದೇವಿ, ಮತ್ತು ಆಂಜನೇಯ ದೇವರುಗಳಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.3 ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಅಭಿಷೇಕ, ಲಲಿತಾ ಸಪ್ತಶರಿ ಪಾರಾಯಣ, ವಿಶೇಷ ಅಲಂಕಾರ ಮಾಡಲಾಗಿತ್ತು. ವಾಸವಿ ದೇವಿಗೆ ಉಯ್ಯಾಲೋತ್ಸವ ನಡೆಸಲಾಯಿತು.ಆರ್ಯ ವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂದ ಪದಾಧಿಕಾರಿಗಳು, ಸಮುದಾಯದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net