ವಿಧಾನಸೌಧದ ಮೆಟ್ಟಿಲಲ್ಲಿ ಉರ್ದು ಹಬ್ಬ ವಿವಾದ: ಈ ಬಗ್ಗೆ ಸಿಎಂ ಕಚೇರಿ ಕೊಟ್ಟ ಸ್ಪಷ್ಟನೆ ಹೀಗಿದೆ | Urdu Row

ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಉರ್ದು ಭಾಷೆ ಹಬ್ಬ ವಿಚಾರಕ್ಕೆ ತೀವ್ರ ಟೀಕೆ, ವಿರೋಧಗಳು ವ್ಯಕ್ತವಾದ ಹಿನ್ನೆಲೆ ವಿವಾದ ಕುರಿತಂತೆ ಸ್ವತಃ ಸಿಎಂ ಕಚೇರಿ ಸ್ಪಷ್ಟನೆ ಕೊಟ್ಟಿದೆ.
vidhanasoudha
ವಿಧಾನಸೌಧದ ಮೆಟ್ಟಿಲಲ್ಲಿ ಉರ್ದು ಹಬ್ಬ ವಿವಾದ: ಈ ಬಗ್ಗೆ ಸಿಎಂ ಕಚೇರಿ ಕೊಟ್ಟ ಸ್ಪಷ್ಟನೆ ಹೀಗಿದೆ
Published on: 

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಭಾಷೆ ಹಬ್ಬ ಮಾಡುವ ಬಗ್ಗೆ ಸಚಿವ ಯುಟಿ ಖಾದರ್​ ಹೇಳಿಕೆ ಬೆನ್ನಲ್ಲೇ ವಿರೋಧ ಪಕ್ಷಗಳಿಂದ ಹಾಗೂ ಜನರಿಂದ ಭಾರಿ ಟೀಕೆಗಳು ಹರಿದುಬಂದ ಬೆನ್ನಲ್ಲೇ ಇದೀಗ ಸ್ವತಃ ರಾಜ್ಯ ಸರ್ಕಾರವೇ ಸ್ಪಷ್ಟನೆ ನೀಡಿದೆ.

ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಉರ್ದು ಭಾಷೆ ಹಬ್ಬ ವಿಚಾರಕ್ಕೆ ತೀವ್ರ ಟೀಕೆ, ವಿರೋಧಗಳು ವ್ಯಕ್ತವಾದ ಹಿನ್ನೆಲೆ ವಿವಾದ ಕುರಿತಂತೆ ಸ್ವತಃ ಸಿಎಂ ಕಚೇರಿ ಸ್ಪಷ್ಟನೆ ಕೊಟ್ಟಿದೆ. ಯಾವುದೇ ಸರಕಾರಿಯೇತರ ಕಾರ್ಯಕ್ರಮಗಳಿಗೆ ಆಸ್ಪದವನ್ನು ನೀಡಿಲ್ಲ. ಈ ರೀತಿ ಬಿಂಬಿಸಿರುವುದು ಸಂಪೂರ್ಣ ಸುಳ್ಳು ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಯಾವುದೇ ರೀತಿಯಲ್ಲೂ ಅನುಮತಿ ನೀಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತದೆ ಎಂದು ಬಿಂಬಿಸಿರುವುದು ಸಂಪೂರ್ಣ ಸುಳ್ಳು. ಸರಕಾರವು ಇಂಥ ಯಾವುದೇ ಅನುಮತಿ ಕೊಟ್ಟಿಲ್ಲ ಎಂದು ಸಿಎಂ ಕಚೇರಿಯು ಸ್ಪಷ್ಟನೆ ನೀಡಿದೆ.

ಇದಕ್ಕೆ ಯುಟಿ ಖಾದರ್​ ಪ್ರತಿಕ್ರಿಯೆ

"ಉರ್ದು ಅಕಾಡೆಮಿಯಿಂದ ಕಾರ್ಯಕ್ರಮ ಇದೆ. ಹಾಲ್​ನಲ್ಲಿ ಅವಾರ್ಡ್ ಕಾರ್ಯಕ್ರಮ ‌ನಡೆಯುತ್ತಿತ್ತು. ಇದನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ" ಎಂದರು.

"ಪ್ರತಿ ಭಾಷೆಗೂ ಅದರದ್ದೇ ಆದ ಮಹತ್ವವಿದೆ. ಅದಕ್ಕೆ ರಾಜಕೀಯ ಸೇರಬಾರದು. ಸ್ಪೀಕರ್ ಆದಾಗ ಯಕ್ಷಗಾನ ವಿಧಾನಸೌಧದಲ್ಲಿ ಮಾಡಬೇಕು ಅಂತ ಅಂದುಕೊಂಡಿದ್ದೆ. ಬುಕ್ ಉತ್ಸವ ವಿಧಾನಸೌಧದಲ್ಲಿ ಮಾಡಿದ್ದೆ. ಇದಕ್ಕೆಲ್ಲ ರಾಜಕೀಯ ವಿರೋಧ ಮಾಡಿದ್ರೆ ಚರ್ಚೆ ಮಾಡ್ತೀವಿ. ಸಿಎಂ ಮತ್ತು ನಮ್ಮ ಸರ್ಕಾರ ಬಿಜೆಪಿ ಅವರಿಗೆ ಚಳಿ ಬಿಡುಸುತ್ತಿದೆ" ಎಂದರು.

Also Read
0,0,0,0,0,0... ಭಾರತ-ಲಂಕಾ ಸೆಮೀಸ್​ನಲ್ಲಿ ನೀವಿದನ್ನು ಗಮನಿಸಿದ್ರಾ? ಶ್ರೀಲಂಕಾಗೆ ನಿಜಕ್ಕೂ ಭಾರಿ ಮುಖಭಂಗ | Asian Games
vidhanasoudha

"ಒಂದು ದಿನದ ಮೂರು ಗಂಟೆಗಳ ಕಾರ್ಯಕ್ರಮ. ಹೆಚ್ಚು ಜನಕ್ಕೆ ತಿಳಿಯಬೇಕು ಅಂತ ಮಾಡಲು ಮುಂದಾಗಿದ್ದೇವೆ ಅಷ್ಟೇ. ತೊಂದರೆ ಆಗುತ್ತದೆ ಎಂದರೆ ಅದನ್ನು ಮಾಡಲು ಹೋಗೋದಿಲ್ಲ. ಸೌಹಾರ್ದ ಸಮಾಜ, ಬಲಿಷ್ಠ ಭಾರತ ನಮ್ಮ ಕನಸು" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net