ಮಿತವಾಗಿ ಇರಲಿ ನೀರಿನ ಬಳಕೆ water

ಮಿತವಾಗಿ ಇರಲಿ ನೀರಿನ ಬಳಕೆ water
ಮಿತವಾಗಿ ಇರಲಿ ನೀರಿನ ಬಳಕೆ water
Published on
ಶ್ರೀನಿವಾಸಪುರ: ಕುಡಿಯುವ ನೀರಿನ ಅಭಾವದಿಂದ ಪಾರಾಗಲು ಪ್ರತಿಯೊಬ್ಬರೂ ನೀರನ್ನು ಮಿತಬಳಕೆ ಮಾಡಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಸರ್ವೇಶ್​ ತಿಳಿಸಿದರು. water
ತಾಲೂಕಿನ ರೋಣೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ನೀರಿನ ಅದಾಲತ್​ನಲ್ಲಿ ಮಾತನಾಡಿ, ನೀರನ್ನು ಮಿತವಾಗಿ ಬಳಸಬೇಕು. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಬ್ಬರಿಗೆ ದೈನಂದಿನ ಕೆಲಸಕ್ಕೆ 51 ಲೀಟರ್​ ಬಳಕೆಯಾಗುತ್ತದೆ. ಕೆಲವರು ನೂರಕ್ಕೂ ಹೆಚ್ಚು ಲೀಟರ್​ ನೀರನ್ನು ದುರ್ಬಳಕೆ ಮಾಡುತ್ತಾರೆ ಎಂದು ಹೇಳಿದರು.
ಪಿಡಿಒ ಮಹೇಶ್​ ಮಾತನಾಡಿ, ಪಂಚಾಯಿತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಜಲಗಾರರ ಮೂಲಕ ಅರಿವು ಮೂಡಿಸಿದ್ದೇವೆ. ಸ್ವಚ್ಚತೆಗೆ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.
ಪಂಚಾಯಿತಿ ಆಡಳಿತಾಧಿಕಾರಿ ಡಾ.ಸುಬಾನ್​ ಮಾತನಾಡಿ, ಹಳ್ಳಿಗಳಲ್ಲಿ ನೀರು ಸೋರಿಕೆಯಾಗದಂತೆ ಕ್ರಮ ವಹಿಸಬೇಕು. ಗ್ರಾಮಗಳಲ್ಲಿ ಬರುವ ಸಮಸ್ಯೆಗಳನ್ನು ಜಲಗಾರರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಪಂಚಾಯಿತಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net