ಶಕ್ತಿ, ಜ್ಞಾನ ಸಮಾಜದ ಒಳಿತಿಗೆ ಬಳಸಿ

ಕಲಬುರಗಿ ಕನ್ನಡ ಭವನದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್​, ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕ್ರಾಂತಿಕಾರಿಗಳಾದ ಭಗತ್​ಸಿಂಗ್​, ರಾಜಗುರು ಹಾಗೂ ಸುಖದೇವ್​ ಅವರ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಡಾ.ಸಮೀನಾ, ಲವಿತ್ರ ವಸದ್​, ಡಾ.ಭಾಗೀರಥಿ ಇತರರಿದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್​, ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕ್ರಾಂತಿಕಾರಿಗಳಾದ ಭಗತ್​ಸಿಂಗ್​, ರಾಜಗುರು ಹಾಗೂ ಸುಖದೇವ್​ ಅವರ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಡಾ.ಸಮೀನಾ, ಲವಿತ್ರ ವಸದ್​, ಡಾ.ಭಾಗೀರಥಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಗತ್​ಸಿಂಗ್​, ರಾಜಗುರು, ಸುಖದೇವ್​ ಹುತಾತ್ಮದಿನ
ಕಲಬುರಗಿ: ಯುವಜನರು ತಮ್ಮ ಶಕ್ತಿ ಮತ್ತು ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಸಹಾಯಕ ಪ್ರಾಧ್ಯಾಪಕಿ ಡಾ.ಸಮೀನಾ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್​, ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕ್ರಾಂತಿಕಾರಿಗಳಾದ ಭಗತ್​ಸಿಂಗ್​, ರಾಜಗುರು ಹಾಗೂ ಸುಖದೇವ್​ ಅವರ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
23ರ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು ಯುವಜನತೆಗೆ ಸ್ಫೂರ್ತಿದಾಯಕ. ತಮ್ಮ ಯೌವ್ವನದ ಸುಗಂಧವನ್ನು ದೇಶದ ಸ್ವಾತಂತ್ರಕ್ಕಾಗಿ ಸಮರ್ಪಿಸಿದ ಈ ಕ್ರಾಂತಿಕಾರಿಗಳು ನಮಗೆ ಇಂದಿಗೂ ದಾರಿದೀಪವಾಗಿದ್ದಾರೆ. ಇಂದಿನ ದಿನಗಳಲ್ಲಿ ಕೇವಲ ಪುಸ್ತಕದ ಹುಳುವಾಗದೆ ಇತಿಹಾಸ ರಚಿಸಿದವರ ವಿಚಾರ ಅರಿಯಬೇಕಿದೆ ಎಂದರು.
ಬ್ರೀಟಿಷರ ಸಾಮ್ರಾಜ್ಯಶಾಹಿ ಕಿತ್ತೊಗೆಯಲು ಯುವಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿದ ಭಗತ್​ಸಿಂಗ್​, ರಾಜಗುರು ಮತ್ತು ಸುಖದೇವ ಅವರ ತ್ಯಾಗ ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಡಿವೈಎಫ್​ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸದ್​ ಮಾತನಾಡಿ, ಇಂದಿನ ಯುವಜನರು ತಂತ್ರಾನ, ಶಿಣ ಮತ್ತು ಅವಕಾಶಗಳೊಂದಿಗೆ ಬೆಳೆದಿದ್ದರೂ ಸಮಾಜದಲ್ಲಿ ನಿರುದ್ಯೋಗ, ಅಸಮಾನತೆ, ಸಾಮಾಜಿಕ ಅನ್ಯಾಯ, ಧಾರ್ಮಿಕ ಅಸಹಿಷ್ಣುತೆ ಸೇರಿ ಅನೇಕ ಸವಾಲು ಎದುರಿಸುತ್ತಿದ್ದಾರೆ. ಭಗತ್​ಸಿಂಗ್​, ರಾಜಗುರು ಮತ್ತು ಸುಖದೇವ್​ ಆದರ್ಶ ಇನ್ನಷ್ಟು ಪ್ರಸ್ತುತವಾಗಿವೆ. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಹೋದರತ್ವ ಸ್ಥಾಪಿಸಲು ಹೋರಾಡಬೇಕು ಎಂದು ಹೇಳಿದರು.
ಸಾಮ್ರಾಜ್ಯಶಾಹಿ ಈಗಲೂ ಜಗತ್ತನ್ನು ಯುದ್ಧದ ಕಾರ್ಮೋಡದಲ್ಲಿ ನರಳಿಸುತ್ತಿದೆ. ಶಾಂತಿ ಸೌಹಾರ್ದತೆಯಿಂದ ಬದುಕಬೇಕಾದ ಜನತೆಯ ಬಾಳಿನಲ್ಲಿ ಯುದ್ಧ, ಹಿಂಸೆ, ರಕ್ತಪಾತದ ತಲ್ಲಣ ಸೃಷ್ಟಿಸುತ್ತಿದೆ. ಯುವಜನತೆ ಒಗ್ಗಟ್ಟಿನಿಂದ ನವಸಾಮ್ರಾಜ್ಯಶಾಹಿ ಹಿಮ್ಮೆಟ್ಟಿಸಲು ಮುನ್ನಡೆಯಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಭಾಗೀರಥಿ, ಭಗತ್​ಸಿಂಗ್​ ಅವರು ಯುವಕರಲ್ಲಿ ಚಿಂತನೆ, ಧೈರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸಿದಂತೆ, ಇಂದಿನ ಯುವಜನರು ಶಿಣ, ವಿಾನ ಮತ್ತು ಪ್ರಜಾಪ್ರಭುತ್ವ ಮೌಲ್ಯ ಬಲಪಡಿಸುವತ್ತ ಕೆಲಸ ಮಾಡಬೇಕಿದೆ. ಅನ್ಯಾಯದ ವಿರುದ್ಧ ದನಿ ಎತ್ತಬೇಕಿದೆ ಎಂದು ಹೇಳಿದರು.
ಬೋಧಕ ಸಿಬ್ಬಂದಿಯಾದ ವನಜಾ ಪಾಟೀಲ್​, ಮಹಾದೇವಿ ಕಲ್ಲಾ, ಭವಾನಿ ಬಡದಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net