ಆನೇಕಲ್ನ ಪಶುವೈದ್ಯಕಿಯ ಸೇವಾ ಇಲಾಖೆ ಹಾಗೂ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಸರ್ಕಾರ ನೀಡುವ ಮೇವು ಕತ್ತರಿಸುವ ಯಂತ್ರವನ್ನು ಶಾಸಕ ಬಿ.ಶಿವಣ್ಣ ವಿತರಿಸಿದರು. ಪಶುವೈದ್ಯಕಿಯ ಇಲಾಖೆ ಸಹಾಯಕ ನಿರ್ದೇಶಕ ಶಿವರಾಮ ಪಾಟೀಲ್, ಮುಖಂಡರಾದ ಎನ್.ಎಸ್.ಪದ್ಮನಾಭ, ರಾಜೇಂದ್ರ ಪ್ರಸಾದ್, ಪ್ರವಿಣ್ ರೆಡ್ಡಿ, ಬನಹಳ್ಳಿ ಅಭಿ, ಮಹಾಂತೇಶ್, ರಾಜ್ ಬಹದ್ದೂರ್ ಇದ್ದರು.
ಆನೇಕಲ್ : ಸರ್ಕಾರ ಶೇ.50 ಸಬ್ಸಿಡಿ ನೀಡಿ ಆರ್ಥಿಕವಾಗಿ ಹಿಂದುಳಿದ ರೈತರ ಸಬಲೀಕರಣಕ್ಕಾಗಿ ಮೇವು ಕತ್ತರಿಸುವ ಯಂತ್ರಗಳನ್ನು ನೀಡಲಾಗಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಪಶುವೈದ್ಯಕಿಯ ಆಸ್ಪತ್ರೆಯಲ್ಲಿ ಸರ್ಕಾರದಿಂದ ನೀಡಲಾದ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಿ ಮಾತನಾಡಿದ ಅವರು, ಆನೇಕಲ್ ಪಶುವೈದ್ಯಕಿಯ ಆಸ್ಪತ್ರೆಗೆ ಅವಶ್ಯಕವಿರುವ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಮತ್ತು ಪ್ರತಿ ಹೋಬಳಿಯಲ್ಲಿಯೂ ಸುಸಜ್ಜಿತ ಪಶುವೈದ್ಯಕಿಯ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.
34 ಸಾವಿರ ಮೌಲ್ಯದ ಈ ಯಂತ್ರದ ಅರ್ಧ ಬೆಲೆಯನ್ನು ಸರ್ಕಾರವೇ ಭರಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಸಮಯ ಉಳಿತಾಯವಾಗುತ್ತದೆ. ರೈತರು ಹೊಸ ಹೊಸ ಯಂತ್ರಗಳನ್ನು ಕೃಷಿಯಲ್ಲಿ ಬಳಸಿಕೊಳ್ಳುವುದರಿಂದ ಸಮಯ ಉಳಿತಾಯವಾಗುವುದರ ಜತೆಗೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಪಶುವೈದ್ಯಕಿಯ ಆಸ್ಪತ್ರೆಯನ್ನು ವಾಲ್ಟೆಕ್ ಕಂಪನಿಯ ಸಿಎಸ್ಆರ್ ಅನುದಾನದೊಂದಿಗೆ 1.5ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 55 ಲ ಮೌಲ್ಯದ ಉಪಕರಣಗಳನ್ನು ಸಂಸ್ಥೆಯು ನೀಡಿದೆ. ಇದರಿಂದಾಗಿ ರೈತರು ರಾಸುಗಳಿಗೆ ಆರೋಗ್ಯ ಸಮಸ್ಯೆಯಾದಾಗ ಹೆಬ್ಬಾಳಕ್ಕೆ ಹೋಗಬೇಕಾಗಿತ್ತು. ಆದರೆ, ಸುಸಜ್ಜಿತ ಆಸ್ಪತ್ರೆಯು ಆನೇಕಲ್ನಲ್ಲಿಯೇ ಆಗುತ್ತಿರುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತರು ಕೃಷಿ ಮೇಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿನ ಸಂಶೋಧನೆ, ನವೀನ ತಂತ್ರಾನದ ಬಗ್ಗೆ ಮಾಹಿತಿ ಪಡೆಯಬೇಕು. ತಾಲೂಕಿನ ವಿವಿಧೆಡೆಯ 14 ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ನೀಡಲಾಯಿತು.