health ತಿಪಟೂರು:ಹಿತ್ತಲಗಿಡ ಮದ್ದಲ್ಲ ಎಂಬ ನಾನ್ನುಡಿ ಬಿಟ್ಟಾಗ ಮಾತ್ರ ಸೊಪ್ಪಿನ ಮಹತ್ವದ ಅರಿವಾಗುತ್ತದೆ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.
ನಗರದ ಎಪಿಎಂಸಿ ಹಣ್ಣು, ಹೂ ಮತ್ತು ತರಕಾರಿ ಮಾರುಕಟ್ಟೆ ಎದುರಿನ ಕೆರೆ ಅಂಗಳದ ಉದ್ಯಾನವನದಲ್ಲಿ ಭಾನುವಾರ ಸೊಗಡು ಜನಪದ ಸಂಸ್ಥೆಯಿಂದ ಆಯೋಜಿಸಿದ್ದ ಸೊಪ್ಪಿನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ದೊರೆಯುವ ಉತ್ತಮ ತರಕಾರಿ ಎಂದರೆ ಅದು ಸೊಪು$್ಪ. ಪ್ರಸ್ತುತ ದಿನಗಳಲ್ಲಿ ಸೊಪ್ಪಿನ ಬಳಕೆ ಕಡಿಮೆಯಾಗಿದೆ. ಪುರಾತನ ಕಾಲದಿಂದ ರೂಢಿಯಲ್ಲಿರುವ ಹಾಗೂ ನಶಿಸುತ್ತಿರುವ ವಸ್ತುಗಳನ್ನು ಮತ್ತು ಕಲೆಯ ಸೊಗಡನ್ನು ಜನಪದ ಸಂಸ್ಥೆಯು ವಿವಿಧ ಕಾರ್ಯಕ್ರಮಗಳ ಮೂಲಕ ಪರಿಚಯಿಸುತ್ತಾ ಬಂದಿದ್ದು, ಈ ಸಲ ಸೊಪ್ಪಿನ ಮೇಳ ಆಯೋಜಿಸುವ ಮೂಲಕ ಜನರ ನೆನಪಿನಿಂದ ಮರೆಯಾಗುತ್ತಿರುವ ನೂರಾರು ಬಗೆಯ ಸೊಪ್ಪನ್ನು ಮತ್ತೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ, ಔಷಧೀಯ ಗುಣಗಳಿರುವ ಸೊಪು$್ಪ ಬಳಸಿ ಎಂದರು.
ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಈಗ ಆರೋಗ್ಯ ಬಹಳ ಮುಖ್ಯವಾಗಿದೆ. ಈ ವ್ಶೆಜ್ಞಾನಿಕ ಯುಗದಲ್ಲಿಯೂ ನಿತ್ಯ ಕಷ್ಟಗಳು ನಮ್ಮನ್ನು ಕಾಡುತ್ತಿರುತ್ತದೆ. ವೈದ್ಯರ ಬಳಿ ಹೋದರೂ ನಿತ್ಯ ವ್ಯಾಯಾಮ ಮಾಡಿ, ಆಹಾರದಲ್ಲಿ ಸೊಪು$್ಪ ತರಕಾರಿ ಹೆಚ್ಚು ಬಳಸಿ ಎಂದು ಸಲಹೆ ನೀಡುತ್ತಾರೆ. ಸೊಪು$್ಪ ಹೆಚ್ಚು ಪೌಷ್ಟಿಕಾಂಶ ಹೊಂದಿರುವುದರಿಂದ ಆಹಾರದಲ್ಲಿ ಹೆಚ್ಚೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.
ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಮಾತನಾಡಿ, ದಿನನಿತ್ಯ ಅಡುಗೆಯಲ್ಲಿ ಉಪಯೋಗಿಸುವ ಕೇವಲ 5&-6 ರೀತಿಯ ಸೊಪು$್ಪಗಳನ್ನು ಮಾತ್ರ ತಿಳಿದಿರುತ್ತೇವೆ. ಇಂದಿನ ಸೊಪು$್ಪಮೇಳದಲ್ಲಿ ಭಾಗವಹಿಸಿದ್ದರಿಂದ 150ಕ್ಕೂ ಹೆಚ್ಚು ವಿಧವಾದ ಸೊಪು$್ಪಗಳಿರುವುದು ತಿಳಿಯಿತು. ಸೊಪ್ಪಿನಲ್ಲಿ ಸಮೃದ್ಧ ಪೌಷ್ಟಿಕಾಂಶಗಳಿರುತ್ತದೆ ಎಂದರು.
ಸೊಗಡು ಜನಪದ ಸಂಸ್ಥೆಯ ಅಧ್ಯಕ್ಷ ಗುರು ಸಿರಿಗಂಧ ಮಾತನಾಡಿ, ನಮ್ಮ ಸಂಸ್ಥೆ ಗ್ರಾಮೀಣ ಆಚಾರ, ವಿಚಾರ, ಆರೋಗ್ಯ, ಕ್ರೀಡೆಗಳನ್ನು ಗುರುತಿಸಿ ಉಳಿಸಿ ಬೆಳಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಈಗ ನಶಿಸಿಹೋಗುತ್ತಿರುವ ಸೊಪ್ಪಿನ ಆಹಾರಗಳನ್ನು, ಅದರ ಉಪಯೋಗಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಬಳಸುವಂತೆ ಮಾಡಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ತಾಲೂಕಿನಲ್ಲಿ ಬೆಳೆಯಲಾದ ನೂರಾರು ಬಗೆಯ ಸೊಪು$್ಪಗಳನ್ನು ಪ್ರದರ್ಶಿಸಲಾಯಿತು. ಸೊಪು$್ಪತಜ್ಞ ಮುರಳೀಧರ ಅವರು ವಿವಿಧ ಸೊಪ್ಪಿನ ಬಳಕೆ, ಅದರ ಔಷಧೀಯ ಗುಣಗಳ ಪರಿಚಯ ಮಾಡಿಕೊಟ್ಟರು. ವಿವಿಧ ಬಗೆಯ ಸೊಪ್ಪಿನ ಖಾದ್ಯಗಳನ್ನು ಪ್ರದರ್ಶಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಶಿವಪ್ರಸಾದ್, ಚೌಡೇಶ್ವರಿ ಸಹಕಾರಿಯ ಸೋಮಶೇಖರ್, ನಗರಸಭೆ ಸದಸ್ಯ ಸೊಪು$್ಪ ಗಣೇಶ್, ತರಕಾರಿ ನಾಗರಾಜು, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ಶಾಂತನಹಳ್ಳಿ ಸುರೇಶ್, ಅನಗೊಂಡನಹಳ್ಳಿ ಆನಂದ್ ಮತ್ತಿತರರು ಇದ್ದರು.