ಅಲ್ಲದೆ, ಮೀಸಲಾತಿ ಆಧಾರದಲ್ಲಿ ಕೆಲ ಸನ್ನದು ನೀಡಲು ಅಬಕಾರಿ ಆಯುಕ್ತರಿಗೆ ಅಧಿಕಾರವನ್ನು ನೀಡಲಾಗಿದೆ. ನವೀಕರಿಸದ, ಮುಟ್ಟುಗೋಲು ಹಾಕಿಕೊಂಡಿರುವ ಸನ್ನದುಗಳನ್ನು ಹರಾಜು ಮಾಡಲು ಹರಾಜು ಪಟ್ಟಿಯಲ್ಲಿ ಸೇರಿಸತಕ್ಕದ್ದು. ಸನ್ನದುದಾರರನು ಮರಣ ಹೊಂದಿದ ದಿನಾಂಕದಿಂದ 6 ತಿಂಗಳದೊಳಗೆ ನವೀಕರಿಸದ ಸಿಎಲ್-2, ಸಿಎಲ್-9, ಸಿಎಲ್-11ಸಿ, ಸಿಎಲ್2ಎ, ಸಿಎಲ್9ಎ ಸನ್ನದು ಅವಧಿ ಮುಕ್ತಾಯಗೊಂಡ, ಮುಟ್ಟುಹಾಕಿಕೊಳ್ಳಲಾದ ಸನ್ನದುಗಳನ್ನು ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನೂ ಸಹ ಹರಾಜು ಪಟ್ಟಿಗೆ ಸೇರಿಸುವಂತೆ ಅಧಿಸೂಚನೆಯಲ್ಲಿ ಇಲಾಖೆ ಉಲ್ಲೇಖಿಸಿದೆ.