ತಾಲೂಕಿನ ಶ್ರೀೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಆತ್ಮಬೋಧಾಮೃತ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ, ಭಗವಂತನ ಆರಾಧನೆಯ ಹೊರತಾಗಿ ಯಾವುದೇ ಆಡಂಬರ ಅಥವಾ ಹೊಗಳಿಕೆಯ ಲಾಭ ಚಿಂತನೆ ಇಲ್ಲದಿರುವುದೇ ಶುದ್ಧ ಜ್ಞಾನವಾಗಿದೆ. ಜ್ಞಾನವಿಲ್ಲದ ಭಕ್ತಿಯಾಗಲಿ, ಭಕ್ತಿಯಿಲ್ಲದ ಜ್ಞಾನವಾಗಲಿ ವ್ಯರ್ಥ ಎಂದು ನುಡಿದರು.
ದೃಢ ಮನಸ್ಸಿಲ್ಲದವನ ಭಕ್ತಿ ವ್ಯರ್ಥಾಡಂಬರ ಮತ್ತು ತೋರಿಕೆಯ ನಾಟಕವಾಗುತ್ತದೆ. ಚಂಚಲ ಮನಸ್ಸನ್ನು ಗೆದ್ದು, ಭೋಗಗಳಲ್ಲಿ ವಿರಕ್ತಿ ಹೊಂದಿ ಮನಸ್ಸನ್ನು ಸಾಧಿಸುವುದೇ ರಾಜಯೋಗದ ಸೂತ್ರವಾಗಿದೆ. ಚಿತ್ತಶುದ್ಧಿಗೆ ಇಂದ್ರಿಯಗಳೇ ಮೊದಲ ಅಡ್ಡಿಯಾಗಿದ್ದು, ಇಂದ್ರಿಯ ಸಂಯಮಕ್ಕಾಗಿ ಯೋಗಸಾಧಕರಿಗೆ ಪ್ರಾಣಾಯಾಮದ ಸಾಧನೆಯನ್ನು ಬೋಧಿಸಲಾಗುತ್ತದೆ ಎಂದರು.
ತಾನು ದೇಹವಲ್ಲ ಆತ್ಮ ಎಂದು ಅರಿತುಕೊಳ್ಳುವುದೇ ಜ್ಞಾನ. ಆತ್ಮಯೋಗವನ್ನು ಸಾಧಿಸಿ ಆತ್ಮಸ್ವರೂಪದಲ್ಲಿ ಐಕ್ಯವಾಗುವುದೇ ಮೋಕ್ಷ. ಪೂರ್ವಪುಣ್ಯದಿಂದ ಉತ್ತಮ ಗುರು ಸಿಕ್ಕಾಗ ಶಿಷ್ಯನ ದೋಷಗಳು ನಿವಾರಣೆಯಾಗಿ, ಜ್ಞಾನ&ವೈರಾಗ್ಯದ ಅನುಗ್ರಹ ದೊರೆಯುತ್ತದೆ ಎಂದು ಹೇಳಿದರು.