ಉತ್ತರ ಕನ್ನಡ ಇತಿಹಾಸದ ಕೌತುಕಗಳ ಅನಾವರಣ; ಉತ್ತರ ಕನ್ನಡ ಸ್ನೇಹ ಸಂಜೆ

ಉತ್ತರ ಕನ್ನಡ ಸಂಘದ ಸ್ನೇಹ ಸಂಜೆ ಕಾರ್ಯಕ್ರಮದಲ್ಲಿ ರಂಗರಸಧಾರೆ ತಂಡದವರಿಂದ ‘ಬುರುಕಿ ವ್ರತ’ ಹಾಸ್ಯ ನಾಟಕ ಪ್ರದರ್ಶನ ಮಾಡಿದರು.
ಉತ್ತರ ಕನ್ನಡ ಸಂಘದ ಸ್ನೇಹ ಸಂಜೆ ಕಾರ್ಯಕ್ರಮದಲ್ಲಿ ರಂಗರಸಧಾರೆ ತಂಡದವರಿಂದ ‘ಬುರುಕಿ ವ್ರತ’ ಹಾಸ್ಯ ನಾಟಕ ಪ್ರದರ್ಶನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕನ್ನಡ ಇತಿಹಾಸದ ಕೌತುಕಗಳ ಅನಾವರಣ
  • ಉತ್ತರ ಕನ್ನಡ ಸ್ನೇಹ ಸಂಜೆಯಲ್ಲಿ ಡಾ.ಲಕ್ಷ್ಮೀಶ ಹೆಗಡೆ ಸೋಂದಾ ಉಪನ್ಯಾಸ
  • ರಂಗರಸಧಾರೆ ತಂಡದವರಿಂದ ಬುರುಕಿ ವ್ರತ ಹಾಸ್ಯ ನಾಟಕ ಪ್ರದರ್ಶನ

ಬೆಂಗಳೂರು: ವಿವಿಧಉದ್ಯೋಗ,ವ್ಯವಹಾರಗಳಿಗಾಗಿಹುಟ್ಟಿದ ಊರು ತೊರೆದು ಬೆಂಗಳೂರಿನಲ್ಲಿನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯಎಲ್ಲರನ್ನು ಒಂದೆಡೆ ಸೇರಿಸುವಉದ್ದೇಶದಿಂದ ಉತ್ತರ ಕನ್ನಡ ಸಂಘಆಯೋಜಿಸಿದ್ದ ಉತ್ತರ ಕನ್ನಡ ಸ್ನೇಹಸಂಜೆ ಕಾರ್ಯಕ್ರಮ ಭಾನುವಾರವಿಶಿಷ್ಠವಾಗಿ ನಡೆಯಿತು.

ನಂದಿನಿಬಡಾವಣೆಯಲ್ಲಿರುವ ಉತ್ತರ ಕನ್ನಡಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿಉತ್ತರ ಕನ್ನಡ ಇತಿಹಾಸದ ಕೌತುಕಗಳುಎಂಬ ವಿಷಯದ ಕುರಿತು ಇತಿಹಾಸಕಾರರಾದಡಾ.ಲಕ್ಷ್ಮೀಶಹೆಗಡೆ ಸೋಂದಾ ಉಪನ್ಯಾಸ ನೀಡಿದರು.

20 ಸಾವಿರವರ್ಷಗಳ ಹಿಂದೆಯೇ ಉತ್ತರ ಕನ್ನಡಪ್ರದೇಶದಲ್ಲಿ ಜನವಸತಿ ಇದ್ದದಾಖಲೆ ಇದೆ.ಉತ್ತರ ಕನ್ನಡಜಿಲ್ಲೆಯ ಅರಸೊತ್ತಿಗೆ,ಧಾರ್ಮಿಕ ಪರಂಪರೆ,ಸಾಂಸ್ಕೃತಿಕಹಿರಿಮೆ, ಸಾಹಿತ್ಯಿಕಮಹತ್ವ, ಪೌರಾಣಿಕಪ್ರತೀತಿಗಳು ಮಾದರಿಯಾಗಿವೆ. ಸೋದೆ ಅರಸರು,ಬಸವಾಸಿ ಕದಂಬರಚಾರಿತ್ರಿಕ ಇತಿಹಾಸವನ್ನು ಯಾರೂಮರೆಯುವಂತಿಲ್ಲ.ಕಂಚಿ ಅರಸರಪಿತೂರಿಯನ್ನು ಬಗ್ಗುಬಡಿದಮಯೂರವರ್ಮನ ಚಾಣಾಕ್ಷತೆ,ಕಾಳುಮೆಣಸಿನರಾಣಿ ಎಂದೇ ಪ್ರಸಿದ್ಧಳಾಗಿರುವಚೆನ್ನಭೈರಾದೇವಿಯ ಆಡಳಿತ,ಸೋದೆ ಅರಸುಮನೆತನದಲ್ಲಿ ಹುಟ್ಟಿದ ಬೆಳವಡಿಮಲ್ಲಮ್ಮಜಗತ್ತಿನಲ್ಲೇ 20ಸಾವಿರ ಮಹಿಳಾಸೇನೆಯನ್ನು ಕಟ್ಟಿದ ಕುತೂಹಲವನ್ನುಡಾ.ಲಕ್ಷ್ಮೀಶಹೆಗಡೆ ಎಳೆಎಳೆಯಾಗಿ ಬಿಚ್ಚಿಟ್ಟರು.ಗೋಕರ್ಣ,ಮುರುಡೇಶ್ವರದಂತಹಪ್ರಸಿದ್ಧ ಕ್ಷೇತ್ರಗಳ ಹಿಂದಿನಪೌರಾಣಿಕ ಘನಾವಳಿಗಳು,ಜಿಲ್ಲೆಯಲ್ಲಿರುವಪ್ರಸಿದ್ಧ ಯಾತ್ರಾ ಕ್ಷೇತ್ರಗಳಮಾಹಿತಿಯನ್ನು ವಿವರಿಸಿದ ರೀತಿಪ್ರೇಕ್ಷಕರ ಗಮನ ಸೆಳೆಯಿತು.

ಉಪನ್ಯಾಸದನಂತರ ರಂಗರಸಧಾರೆ ತಂಡದ ಕಲಾವಿದರಿಂದಪರ್ವತವಾಣಿಯವರ ‘ಬುರುಕಿ ವ್ರತ’ಹಾಸ್ಯ ನಾಟಕ ಪ್ರದರ್ಶನ ನಡೆಯಿತು.ನಾಟಕವನ್ನುಪ್ರದೀಪ ಅಂಚೆ ನಿರ್ದೇಶನ ಮಾಡಿದ್ದರು.

ಕಾರ್ಯಕ್ರಮದಲ್ಲಿಸಂಘದ ಅಧ್ಯಕ್ಷ ಅರವಿಂದ ಎನ್.ನಾಯಕ್,ಗೌರವ ಕಾರ್ಯದರ್ಶಿಬನವಾಸಿ ಕೃಷ್ಣಮೂರ್ತಿ ಮತ್ತಿತರಪದಾಧಿಕಾರಿಗಳು,ಉತ್ತರ ಕನ್ನಡಜಿಲ್ಲೆಯಿಂದ ಬಂದು ಬೆಂಗಳೂರಿನಲ್ಲಿನೆಲೆಸಿರುವ ನೂರಾರು ನಿವಾಸಿಗಳುಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net