ಕಂಠೀರವ ಸ್ಟುಡಿಯೋದಲ್ಲಿ ಟಿ.ಎಸ್.ಕರಿಬಸಯ್ಯ ಪುತ್ಥಳಿ ಅನಾವಣ

ಕಂಠೀರವ ಸ್ಟುಡಿಯೋ ಆವರಣದಲ್ಲಿ ಹಿರಿಯ ಕಲಾವಿದ ಟಿ.ಎಸ್. ಕರಿಬಸಯ್ಯ ಅವರ ಪುತ್ಥಳಿಯನ್ನು ವಾತಾ ಇಲಾಖೆ ಆಯುಕ್ತ ಅನುಚೇತ್ ಅನಾವರಣಗೊಳಿಸಿದರು. ಕಂಠೀರವ ಸ್ಟುಡಿಯೋ ಚೇರ್ಮನ್ ಮೆಹಬೂಬ್ ಪಾಷ, ಕರಿಬಸಯ್ಯ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಹಿರಿಯ ಕಲಾವಿದ ಟಿ.ಎಸ್. ಕರಿಬಸಯ್ಯ ಅವರ ಪುತ್ಥಳಿಯನ್ನು ವಾತಾ ಇಲಾಖೆ ಆಯುಕ್ತ ಅನುಚೇತ್ ಅನಾವರಣಗೊಳಿಸಿದರು. ಕಂಠೀರವ ಸ್ಟುಡಿಯೋ ಚೇರ್ಮನ್ ಮೆಹಬೂಬ್ ಪಾಷ, ಕರಿಬಸಯ್ಯ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಂಠೀರವ ಸ್ಟುಡಿಯೋದಲ್ಲಿ ಟಿ.ಎಸ್.ಕರಿಬಸಯ್ಯ ಪುತ್ಥಳಿ ಅನಾವಣ
  • ಕಂಠೀರವ ಸ್ಟುಡಿಯೋ ಸ್ಥಾಪನೆಯ ಹಿಂದಿನ ರೂವಾರಿ
  • ವಾರ್ತಾ ಇಲಾಖೆ ಆಯುಕ್ತ ಅನುಚೇತ್ ಪುತ್ಥಳಿ ಅನಾವರಣ

ಬೆಂಗಳೂರು: ಬೆಂಗಳೂರಿನಕಂಠೀರವ ಸ್ಟುಡಿಯೋ ಸ್ಥಾಪನೆಯಹಿಂದಿನ ರೂವಾರಿ ತಿಪಟೂರಿನ ಟಿ.ಎಸ್ಕರಿಬಸಯ್ಯ ಅವರ ಪುತ್ಥಳಿಯನ್ನುಸ್ಟುಡಿಯೋ ಆವರಣದಲ್ಲಿ ಮಂಗಳವಾರಅನಾವರಣಗೊಳಿಸಲಾಯಿತು.

ವಾರ್ತಾಮತ್ತು ಸಾರ್ವಜನಿಕ ಇಲಾಖೆ ಆಯುಕ್ತಅನುಚೇತ್ ಪುತ್ಥಳಿಯನ್ನುಅನಾವರಣಗೊಳಿಸಿದರು.ಕರಿಬಸವಯ್ಯಕುಟುಂಬ ಸದಸ್ಯರು ಈ ವೇಳೆಉಪಸ್ಥಿತರಿದ್ದರು.

ಕರಿಬಸಯ್ಯಅವರ ಪುತ್ಥಳಿಯನ್ನು ಅನಾವರಣಕ್ಕಾಗಿಕಲಾಕಂಠೀರವ ದಿ.ಟಿ.ಎಸ್.ಕರಿಬಸಯ್ಯ ಸೇವಾಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ಉಪಾಧ್ಯಕ್ಷತಿಪಟೂರು ದಯಾನಂದ ಸಾಗರ್ ಹಿಂದಿನಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಮನವಿ ಸಲ್ಲಿಸಿದ್ದರು.

ಕಂಠೀರವಸ್ಟುಡಿಯೋ ಸ್ಥಾಪನೆಯಾಗಿ 60ವರ್ಷ ತುಂಬಿರುವಜೊತೆಗೆ ಕರಿಬಸವಯ್ಯ ಅವರಿಗೆ 115ವರ್ಷವಾಗಿದ್ದು,ಅವರ ಜನ್ಮಶತಮಾನೋತ್ಸವ,ಕಂಠೀರವ ಸ್ಟುಡಿಯೋದವಜ್ರ ಮಹೋತ್ಸವ ಆಚರಿಸಬೇಕೆಂದುಅವರು ಒತ್ತಾಯಿಸಿದ್ದಾರೆ.

ಕನ್ನಡಚಿತ್ರರಂಗದ ಆರಂಭದ ದಿನಗಳಿಂದ1966ರವರೆಗೆಚಿತ್ರಿಕರಣಕ್ಕೆ ಮದ್ರಾಸಿಗೆಹೋಗುವ ಪರಿಸ್ಥಿತಿ ಇತ್ತು. ಆ ದಿನಗಳಲ್ಲಿಟಿ.ಎಸ್ಕರಿಬಸಯ್ಯ ಅವರು ಗುಬ್ಬಿವೀರಣ್ಣನವರಜತೆಗೂಡಿ 1966ರಲ್ಲಿ ಬೆಂಗಳೂರಿನಲ್ಲಿಕಂಠೀರವ ಸ್ಟುಡಿಯೊ ಸ್ಥಾಪಿಸಿಚಿತ್ರರಂಗದ ಅನೇಕ ಕಲಾವಿದರಿಗೆನಿರ್ದೇಶಕರಿಗೆ,ನಿರ್ಮಾಪಕರಿಗೆ,ಆಶ್ರಯದಾತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net