ಬಿಡದಿ ತಾಲೂಕಿನ ಪುರಸಭೆ ವ್ಯಾಪ್ತಿಯ ಇಂದಿರಾನಗರದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಭಾಗವಹಿಸಿದ್ದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಪುರಸಭೆ ಸದಸ್ಯರಾದ ಸಿ.ಉಮೇಶ್, ಕುಮಾರ್, ಹೊಂಬಯ್ಯ, ಶ್ರೀನಿವಾಸ್, ಬಿಂದ್ಯಾ, ಮನು, ರೇಣುಕಪ್ಪ, ನವೀನ್ ಕುಮಾರ್ ಇದ್ದರು.
Published on:
Copied
Follow Us
ದೇಶ ಭಕ್ತ ಸಂಗೊಳ್ಳಿ ರಾಯಣ್ಣ ಹೆಸರು ಚಿರಸ್ಥಾಯಿಯಾಗಿದ್ದು, ರಾಯಣ್ಣ ಒಂದು ಸಮಾಜದ ಸ್ವತ್ತಲ್ಲ. ಇಡೀ ಸಮಾಜಕ್ಕೆ ಸಲ್ಲುತ್ತಾರೆ. ನಾವು ನೆಮ್ಮದಿ ಬದುಕು ನಡೆಸುತ್ತಿದ್ದೇವೆಂದರೆ ರಾಯಣ್ಣ ಅವರ ಮಹನೀಯರು ಹಾಕಿಕೊಟ್ಟ ಆದರ್ಶಗಳು ಎಂದರೆ ತಪ್ಪಾಗಲಾರದು ಎಂದು ಪೌರಾಡಳಿತ ಸಚಿವ ಬಾಲಕೃಷ್ಣ ಹೇಳಿದರು.
ಪುರಸಭೆ ವ್ಯಾಪ್ತಿಯ ಇಂದಿರಾನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ರಾಯಣ್ಣನ ಪ್ರತಿಮೆ ಸುತ್ತ ಪಾರ್ಕ್ ಸೇರಿ ಇನ್ನಿತರೆ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.
ವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉದ್ಘಾಟನೆ ಮಾಡಿಸುವುದಾಗಿ ತಿಳಿಸಿದರು.
ಇದು ಸಿಎಂ ತವರು ಜಿಲ್ಲೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಕೊಂಡು ಹೋಗಲು 15 ದಿನ ಗಡುವು ನೀಡಿದ್ದೇನೆ. 15 ದಿನ ಕಳೆದರೆ 2 ವರ್ಷ ಯಾವುದೇ ಅಧಿಕಾರಿಗಳ ವರ್ಗಾವಣೆಗೆ ಆಸ್ಪದ ನೀಡುವುದಿಲ್ಲ ಎಂದರು.
ಸಚಿವ ಬಾಲಕೃಷ್ಣ ಅವರನ್ನು ಕೈ ಮುಖಂಡರು ಬಿಜಿಎಸ್ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು.
ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಆರ್.ಎಸ್.ಎಸ್.ಎನ್ ಸದಸ್ಯರಾದ ವಾಜರಹಳ್ಳಿ ಮಹೇಶ್,ಸಂತೋಷ್, ಎಡಿಸಿ ಚಂದ್ರಯ್ಯ, ತಹಸೀಲ್ದಾರ್ ತೇಜಸ್ವಿನಿ, ಪುರಸಭೆ ಮುಖ್ಯಾಧಿಕಾರಿ ಪ್ರಮೀಳಮ್ಮ ಇದ್ದರು.