

ವಿಜಯಪುರ :
ಪಟ್ಟಣದಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದ್ದು,ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಪಟ್ಟಣದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.ಮೂರು ದಿನಗಳ ಒಳಗಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸರಿಪಡಿಸದಿದ್ದರೆ ಪುರಸಭೆ ಮುಂದೆ ಅರ್ನಿದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಕರವೇ ಮುಖಂಡ ಪುರ ಕೃಷ್ಣಪ್ಪ ಅವರು, ಲೋಕೋಪಯೋಗಿ ಇಲಾಖೆಯಿಂದ ಮಾಡುತ್ತಿರುವ ರಸ್ತೆ ವಿಸ್ತರಣೆಕಾಮಗಾರಿಯು ಅವೈಜ್ಞಾನಿಕದಿಂದ ಕೂಡಿದೆ. ರಸ್ತೆಯನ್ನು ತಗ್ಗು ಮಾಡಿ, ಚರಂಡಿಎತ್ತರಿಸಿದ್ದಾರೆ. ಇದರಿಂದ ಮಳೆನೀರು ಚರಂಡಿಯಲ್ಲಿ ಹರಿಯದೇ ರಸ್ತೆಗಳಲ್ಲಿ ಹರಿಯುತ್ತಿದೆ. ವಿದ್ಯುತ್ ಕಂಬಗಳನ್ನು ಚರಂಡಿಯಿಂದ ಹೊರಗೆ ಹಾಕುವುದನ್ನು ಬಿಟ್ಟು, ಪಾದಚಾರಿ ಮಾರ್ಗದಲ್ಲಿ ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಾಮಗಾರಿ ಆರಂಭಗೊಂಡು ಎರಡು ವರ್ಷಗಳೇ ಕಳೆದರೂಕಾಮಗಾರಿ ಮುಗಿದಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ದಲಿತ ಜನಸೇನೆ ರಾಜ್ಯ ಅಧ್ಯಕ್ಷ ಟಿ.ಭರತ್ ಮಾತನಾಡಿ, ಕಾಮಗಾರಿ ನಡೆಯುವ ವೇಳೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ರ್ನಿಲಕ್ಷ$್ಯ ತೋರಿಸುತ್ತಿರುವುದರಿಂದ ಇಂತಹ ಪರಿಸ್ಥಿತಿ ಉಂಟಾಗುತ್ತಿದೆ. ಕಾಮಗಾರಿ ಮಾಡುವ ಮೊದಲು ಜನರು ಎಷ್ಟು ಸಮಸ್ಯೆ ಎದುರಿಸಿದ್ದರೋ ಕಾಮಗಾರಿ ಮಾಡಿದ ನಂತರ ಎರಡರಷ್ಟು ಸಮಸ್ಯೆ ಎದುರಿಸುವಂತಾಗಿದೆ. ಒಂದೊಂದು ಕಡೆ, ಒಂದೊಂದು ಅಳತೆಯಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.