ಕೆಂಪಾಪುರ ಅಗ್ರಹಾರ ಸಹಕಾರ ಸಂಕ್ಕೆ ಅವಿರೋಧ ಆಯ್ಕೆ / TYAMAGONDLU

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೆಂಪಾಪುರ ಅಗ್ರಹಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಮಹಿಮಣ್ಣ ಮತ್ತು ಉಪಾಧ್ಯಕ್ಷರಾಗಿ ಆರ್​.ಡಿ.ಕವಿತಾ ಆಯ್ಕೆಯಾದರು. ಮಾಜಿ ಅಧ್ಯಕ್ಷ ಗಂಗರಾಜು, ಮಾಜಿ ಉಪಾಧ್ಯಕ್ಷ ಆರ್​.ಸಿದ್ದೇಗೌಡ, ನಿರ್ದೇಶಕರಾದ ಎಸ್​.ಶ್ರೀನಿವಾಸನ್​, ಎಂ.ಸಿ.ಅಶ್ವತ್ಥ ಇದ್ದರು.

Published on
ತ್ಯಾಮಗೊಂಡ್ಲು : ನೆಲಮಂಗಲ ತಾಲೂಕಿನ ಕೆಂಪಾಪುರ ಅಗ್ರಹಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾಗಿ ವಿ.ಮಹಿಮಣ್ಣ ಮತ್ತು ಉಪಾಧ್ಯಕ್ಷರಾಗಿ ಆರ್​.ಡಿ.ಕವಿತಾ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಲಕ್ಕಸಂದ್ರ ಗಂಗರಾಜು, ಉಪಾಧ್ಯಕ್ಷ ಆರ್​.ಸಿದ್ದೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು ಎಂದು ಚುನಾವಣಾಧಿಕಾರಿ ಎಚ್​.ನಾಗರಾಜು ಅವಿರೋಧ ಆಯ್ಕೆ ಘೋಷಿಸಿದರು.
ಅಧ್ಯಕ್ಷ ವಿ.ಮಹಿಮಣ್ಣ ಮಾತನಾಡಿ, ಪ್ರಸ್ತುತ 429 ರೈತರಿಗೆ 3.20 ಕೋಟಿ ರೂಪಾಯಿ ಕೆಸಿಸಿ ಬೆಳೆ ಸಾಲ, 130 ಜನರಿಗೆ 1.76 ಕೋಟಿ ಚಿನ್ನಾಭರಣ ಸಾಲ, ಮೂರು ಜನರಿಗೆ 14.19 ಲಕ್ಷ ಮಧ್ಯಮಾವಧಿ ಸಾಲ ನೀಡಿದ್ದು, ಸಂಘದ ಉಳಿತಾಯ ಖಾತೆಯಲ್ಲಿ 92.60 ಲಕ್ಷ ರೂಪಾಯಿ ಠೇವಣಿ ಇದೆ. ಇನ್ನೂ ಮುಂದೆಯೂ ಸಂಘವನ್ನು ಎಲ್ಲ ನಿರ್ದೇಶಕರ ಸಹಕಾರದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದರು.
ನಿರ್ದೇಶಕರಾದ ಗೋವಿಂದಯ್ಯ, ಲಕ್ಷ್ಮೀಪತಯ್ಯ, ದೊಡ್ಡರಾಮಯ್ಯ, ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಮುಖಂಡರಾದ ಕುಲುವನಹಳ್ಳಿ ಮಹೇಶ್​, ಕುಮಾರ್​, ಪ್ರಕಾಶ್​, ಲಕ್ಷ$್ಮಣಗೌಡ, ನಾರಾಯಣಸ್ವಾಮಿ, ಮೇಲ್ವಿಚಾರಕ ಎಚ್​.ಎನ್​.ರವಿಕುಮಾರ್​, ಸಿಇಒ ಬೈರೇಗೌಡ, ಸಿಬ್ಬಂದಿ ಶಶಿಕುಮಾರ್​, ಎಂ.ಎಸ್​.ಪವನ್​ಕುಮಾರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net