ಅರಸೀಕೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ನಿರ್ದೇಶಕ ಸೇರಿದಂತೆ 20 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಶೇಖರಪ್ಪ (ಶೇಖರ್ ಸಂಕೋಡನಹಳ್ಳಿ) ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅನಿಲ್ ಕುಮಾರ್, ಪವನ್, ಆನಂದ, ಚಂದ್ರಶೇಖರ್, ಶಶಿಧರ್, ಜಗದೀಶ್, ವಿರೂಪಾಕ್ಷಪ್ಪ, ಕುಮಾರ್, ಭರತೇಶ್,ಲೋಕೇಶ್, ಓಂಕಾರಮೂರ್ತಿ, ಮಲ್ಲೇಶ್ ಸಾಮಾನ್ಯ ಕ್ಷೇತ್ರದ ನಿರ್ದೇಶಕರಾಗಿದ್ದಾರೆ. ಗೌರಮ್ಮ, ಸರೋಜಾ, ರತ್ನ, ಹೇಮಾವತಿ, ಶೈಲಜಾ, ಪ್ರೇಮಾ ಮಹಿಳಾ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಕೋಟಾದ ಒಂದು ಸ್ಥಾನ ಖಾಲಿ ಉಳಿದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎ.ಎಲ್.ಮೋಹನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.