ಶ್ರೀನಿವಾಸಪುರ labour day ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಹಿರಿಯ ರೈತ ಕಾರ್ಮಿಕ ನಾಯಕರ ಕಾಮ್ರೇಡ್ ಎನ್.ವೀರಪ್ಪರೆಡ್ಡಿ, ಕಾರ್ಮಿಕ ಸಂದ ಜಿಲ್ಲಾ ಮುಖಂಡ ಅಮರನಾರಾಯಣ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಬೈರಾ ರೆಡ್ಡಿ, ತಾಪಂಅಧಿಕಾರಿ ಚಿನ್ನಪ್ಪ ಸಿಐಟಿಯು ಜಿಲ್ಲಾ ಉಪಾಧ್ಯರಾದ ಆರ್.ಆಂಜಲಮ್ಮ, ತಾಲೂಕು ಮುಖಂಡರಾದ ಮಮತಾ, ಪುಷ್ಪಾ, ಆಂಜಲ, ಆನಂದ್ಕುಮಾರ್, ಶಿವರಾಜ್ಕುಮಾರ್, ಶಿವಣ್ಣ ಇದ್ದರು.
ಶ್ರೀನಿವಾಸಪುರ: ಹಲವು ತ್ಯಾಗ&ಬಲಿದಾನಗಳಿಂದ ಗಳಿಸಿದ್ದ ಕಾರ್ಮಿಕ labour day ಕಾನೂನುಗಳನ್ನು ಕೇಂದ್ರ ಸರ್ಕಾರವು ರದ್ದುಪಡಿಸಿ, ಇದೀಗ ದೇಶದಾದ್ಯಂತ ಕಾರ್ಮಿಕ ಸಂಹಿತೆಜಾರಿ ಮಾಡಿದ್ದು, ಕಾರ್ಮಿಕರು ದಿಟ್ಟ ಹೋರಾಟನಡೆಸುವ ಮೂಲಕ ಕಾರ್ಮಿಕ ಸಂಹಿತೆಹಿಮ್ಮೆಟ್ಟಿಸಬೇಕು ಎಂದು ಜಿಲ್ಲಾ ಸಿಐಟಿಯುಪ್ರಧಾನ ಕಾರ್ಯದರ್ಶಿ ಎಂ.ವಿಜಯ ಕೃಷ್ಣ ಕರೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸೆಂಟರ್ ಆ್ ಇಂಡಿಯಾ ಟ್ರೇಡ್ ಯೂನಿಯನ್ ಸಿಐಟಿಯು ಮತ್ತು ಕಾರ್ಮಿಕ ಸಂಟನೆಗಳಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.
ಸ್ವಾತಂತ್ರ$್ಯ ಪೂರ್ವ ಮತ್ತು ನಂತರದಲ್ಲಿಯೂ ದೇಶದ ಕಾರ್ಮಿಕರು ಹಲವು ಹೋರಾಟ ನಡೆಸಿದ್ದರು, ಅಲ್ಲದೇ ಅಂಬೇಡ್ಕರ್ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕ ಪರಕಾನೂನುಗಳನ್ನು ಜಾರಿಗೊಳಿಸಿದ್ದನ್ನು ಸ್ಮರಿಸಿದರು.
ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಇದರ ವಿರುದ್ಧ ಕಾರ್ಮಿಕರು ಸಹಿ ಸಂಗ್ರಹ ಚಳುವಳಿ ನಡೆಸುತ್ತಿದ್ದು, ಮೇ 30 ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟಹಮ್ಮಿಕೊಳ್ಳಲಾಗಿದೆ ಎಂದರು.
ದಲಿತ ಸಂದ ಮುಖಂಡ ಪುರಸಭಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಜಗತ್ತಿನ ಸಾಮ್ರಾಜ್ಯಶಾಹಿ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿವೆ. ದುಡಿಯುವ ವರ್ಗ ಐಕ್ಯತೆಯಿಂದ ಹೋರಾಟಗಳು ನಡೆಸಿದಾಗ ಮಾತ್ರ ಕಾರ್ಮಿಕರ ಬೇಡಿಕೆಈಡೇರಿಸಿಕೊಳ್ಳಲು ಸಾಧ್ಯ ಎಂದರು.
ಮುನಿರಾಜು, ರೈತ ಮುಖಂಡರಾದ ಮಂಜುಳಾ, ಸಯದ್ ಫಾರೂಕ್, ಸೋಮಶೇಖರಗೌಡ, ವೆಂಕಟಲ್ಮಮ್ಮ ಇದ್ದರು.