ಬದ್ದೆಪಲ್ಲಿಯಲ್ಲಿ ರೈತ ತರಬೇತಿ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ; ಸಾಥ್ ನೀಡಿದ ಎಂಎಲ್ಸಿ ಡಾ.ಬಿ.ಜಿ.ಪಾಟೀಲ್
,
Published on:
Copied
Follow Us
ಗುರುಮಠಕಲ್ : ಕೇಂದ್ರ ಸರ್ಕಾರದ ನಬಾರ್ಡ ಯೋಜನೆ ವತಿಯಿಂದ "ಕಲ್ಯಾಣ ಸಂಪದ" ಕಾರ್ಯಕ್ರಮದಡಿ ಇಂದು ನಮ್ಮ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ರೈತ ತರಬೇತಿ ಮತ್ತು ಸಾಮಾನ್ಯ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ವಿಧಾನ ಪರಿಷತ್ ಸದಸ್ಯರಾದ ಡಾ. ಬಿ. ಜಿ. ಪಾಟೀಲ ಅವರು ಭಾಗವಸಿದರು.
ಈ ಸಂಧರ್ಭದಲ್ಲಿ ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಡಾ.ಪಾಟೀಲ್ ಅವರು ರೈತರಿಗೆ ನೆರವಿನ ಚೆಕ್ ವಿತರಿಸಿದರು.
ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರ್, ನಬಾರ್ಡ್ ಅಧ್ಯಕ್ಷ ಶಹಾಜೀ ಕೃಷ್ಣ , ಐಟಿಸಿ ಕಂಪನಿ ಅಧ್ಯಕ್ಷ ಸಂಜಯ ಪುರಿ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಮತ್ತು ಎಲ್ಲ ರೈತ ಬಂಧುಗಳು ಉಪಸ್ಥಿತರಿದ್ದರು