ಚಿಂತಾಮಣಿ: ಮುರಗಮಲ್ಲಾ ಗ್ರಾಮದ ಹೊರವಲಯದ ಕೃಷಿ ಹೊಂಡದಲ್ಲಿ ಶನಿವಾರ ಸುಮಾರು 45 ವರ್ಷ ವಯಸ್ಸಿನ ಅಪರಿಚಿತ ಶವ ಪತ್ತೆಯಾಗಿದೆ. ಗ್ರಾಮದ ಎಂ.ಕೆ.ನಾಗರಾಜ್ ಶನಿವಾರ ಬೆಳಗ್ಗೆ ತೋಟದಲ್ಲಿ ಸುತ್ತಾಡಿಕೊಂಡು ಕೃಷಿ ಹೊಂಡದ ಬಳಿ ಬಂದಾಗ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಿಯರ ನೆರವಿನೊಂದಿಗೆ ಶವ ಹೊರತೆಗೆದು, ಮರಣೋತ್ತರ ಪರೀೆಗೆ ಕಳುಹಿಸಿದರು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.