ಮಾನವ ಜನ್ಮದ ಮಹತ್ವ ಅರಿಯಿರಿ

Understand the importance of human birth
Understand the importance of human birth
Published on
ಕೊರಟಗೆರೆ: ವಸುದೈವ ಕುಟುಂಬಕಂ ಎಂಬ ಮಹಾತತ್ವ ನಾವು ಯಾವತ್ತೂ ಮರೆಯಬಾರದು. ನಾವೆಲ್ಲರೂ ಒಂದೇ ಕುಟುಂಬದವರು ಎನ್ನುವುದನ್ನು ನಮ್ಮ ದೇವಾಲಯಗಳು ಸದಾ ನೆನಪಿಸುತ್ತವೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕೋಳಾಲ ಹೋಬಳಿ ಕಾಟೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಭೂದೇವಿ ಸಮೇತ ಗೋವಿಂದರಾಜಸ್ವಾಮಿ ಹಾಗೂ ನಾಗದೇವತೆಗಳ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿ, ಆಧುನಿಕ ಶಿಕ್ಷಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮಾನವರು ತಮ್ಮ ಮನೆಗಳಷ್ಟೇ ಅಲ್ಲ, ಮನಸ್ಸುಗಳನ್ನೂ ಸಂಕುಚಿತಗೊಳಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ&ಮತ, ಆಚಾರ&ವಿಚಾರಗಳ ಅಂತರಗಳನ್ನು ಮೀರಿ ಮಾನವ ಜನ್ಮದ ಮಹತ್ವ ಅರಿತು, ಪರಸ್ಪರ ಸೌಹಾರ್ದತೆಯಿಂದ ಬದುಕುವುದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದರು.
ನಾವು ಈ ಜಗತ್ತಿಗೆ ಬಂದಾಗ ಏನನ್ನೂ ತಂದಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದ್ದರಿಂದ "ನಾನು' ಎನ್ನುವ ಸ್ವಾರ್ಥಭಾವ ಬಿಟ್ಟು "ನಾವು' ಎನ್ನುವ ಸಾಮೂಹಿಕ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಧಾರ್ಮಿಕ ಆಚರಣೆಗಳಿಗೆ, ಸಂಸತಿ&ಸಂಪ್ರದಾಯಗಳಿಗೆ ಆದ್ಯತೆ ನೀಡಿ, ಜೀವನವನ್ನು ಮೌಲ್ಯಯುತವಾಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net