1 ಕೋಟಿ ರೂ. ವೆಚ್ಚದಲ್ಲಿ ಭೂಗತ ವಿದ್ಯುತ್​ ತಂತಿ ಅಳವಡಿಕೆ / HOSAKOTE

ಹೊಸಕೋಟೆ ತಾಲೂಕಿನ ದೊಡ್ಡ ದುನ್ನಸಂದ್ರ ಕ್ರಾಸ್​ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಭೂಗತ ವಿದ್ಯುತ್​ ತಂತಿ ಅಳವಡಿಕೆ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು.
ಹೊಸಕೋಟೆ ತಾಲೂಕಿನ ದೊಡ್ಡ ದುನ್ನಸಂದ್ರ ಕ್ರಾಸ್​ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಭೂಗತ ವಿದ್ಯುತ್​ ತಂತಿ ಅಳವಡಿಕೆ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು.
Published on
ಹೊಸಕೋಟೆ : ರಸ್ತೆ ಬದಿಯ ಅಪಾಯಕಾರಿ ವಿದ್ಯುತ್​ ಕಂಬಗಳನ್ನು 1 ಕೋಟಿ ರೂ. ವೆಚ್ಚದಲ್ಲಿ ತೆರವು ಗೊಳಿಸಿ, ಭೂಮಿ ಆಳದಲ್ಲಿ ತಂತಿ ಅಳವಡಿಸುವುದರಿಂದ ಅವಡಗಳಿಂದ ಮುಕ್ತಿ ಹೊಂದಬಹುದು. ಹಾಗೆಯೇ ರಸ್ತೆಗಳನ್ನು ವಿಸ್ತರಿಸಿ, ಸುಗಮಸಂಚಾರಕ್ಕೂ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೊಡ್ಡ ದುನ್ನಸಂದ್ರ ಕ್ರಾಸ್​ನಲ್ಲಿ 1 ಕೋಟಿ ರೂ. ಅನುದಾನದಲ್ಲಿ ಭೂಆಳದಲ್ಲಿ ವಿದ್ಯುತ್​ ತಂತಿ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚಾಗುತ್ತಿದೆ. ಸುಗಮ ಸಂಚಾರಕ್ಕೆ ನೂತನ ಬಸ್​ ವ್ಯವಸ್ತೆ, ಭೂಗತ ವಿದ್ಯುತ್​ ತಂತಿ ಅಳವಡಿಕೆಗೆ, ಅಂತರ್ಜಲಮಟ್ಟ ಹೆಚ್ಚಿಸಲು ಕೆರೆಗಳಿಗೆ ನೀರು ಹಾಯಿಸುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ರೈಲ್ವೆ ಮೇಲ್ಸೇತುವೆ ಶ್ರೀ: ಕೊರಳೂರು ರೈಲ್ವೆ ಮೇಲ್ಸೇತುವೆ ಸಂಬಂಧ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತಿದ್ದು, ಯೋಜನೆ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ಹಣಕ್ಕೆ ತಡೆಯೊಡ್ಡಿದೆ. ರಾಜ್ಯ ಸರ್ಕಾರ 54 ಕೋಟಿ ರೂ.ಅನ್ನು ಕೇಂದ್ರಕ್ಕೆ ಪಾವತಿಸಿದ ನಂತರ ಕಾಮಗಾರಿ ಶುರು ಮಾಡುವುದಾಗಿ ರೈಲ್ವೆ ಸಚಿವಾಲಯ ಹೇಳಿದಾಗ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯದ ಪಾಲನ್ನು ಪಾವತಿಸಲಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಹಣ ಬಿಡುಗಡೆಗೆ ಸಚಿವ ಸಂಪುಟವೂ ಅನುಮೋದನೆ ನೀಡಿದೆ. ಕೇಂದ್ರದ ಜತೆ ಮತ್ತೊಮ್ಮೆ ಸಂಪರ್ಕ ಸಾಧಿಸಿ ಕಾಮಗಾರಿಯನ್ನು ಶ್ರೀ ಕೈಗೆತ್ತಿಕೊಳ್ಳಲಾಗುವುದು ಎಂದು ಶರತ್​ ಬಚ್ಚೇಗೌಡ ತಿಳಿಸಿದರು.
ಬಮುಲ್​ ನಿರ್ದೇಶಕ ಕೆ.ಎಂ.ಎಂ.ಮಂಜುನಾಥ್​, ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ಬಾಬು ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ ಮುನಿಯಪ್ಪ, ನಾಯಕಿ ಲಕ್ಷಿ$್ಮ, ಮುಖಂಡರಾದ ಕೃಷ್ಣ ಮೂರ್ತಿ, ಕೃಷ್ಣಾ ರೆಡ್ಡಿ, ಶೇಷಪ್ಪ, ಬೆಸ್ಕಾಂ ಇಇ ವೆಂಕಟೇಶಪ್ಪ, ಎಇಇ ಪುಟ್ಟಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net