ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಬಳಿಯ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದ ಚರಂಡಿಯಲ್ಲಿ ಕಸ ತುಂಬಿರುವುದು.
Published on:
Copied
Follow Us
ಕಮಲಾಪುರ: ಮಹಾಗಾಂವ್ ಕ್ರಾಸ್ನ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದ ಚರಂಡಿಯಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರು ಸುಗಮವಾಗಿ ಹರಿದು ಹೋಗದ ದುರ್ವಾಸನೆ ಹರಡುತ್ತಿದೆ.
ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆ ಇದಾಗಿದ್ದು, ಸುಮಾರು 520 ವಿದ್ಯಾರ್ಥಿಗಳು ಆಭ್ಯಾಸ ಮಾಡುತ್ತಿದ್ದಾರೆ. ಕಸ&ಕಡ್ಡಿ ಹಾಗೂ ಮನೆ ಕಟ್ಟಡ ತ್ಯಾಜ್ಯ ಚರಂಡಿಯಲ್ಲಿ ಬಿದ್ದಿದ್ದರಿಂದ ನೀರು ಮುಂದಕ್ಕೆ ಹರಿಯುತ್ತಿಲ್ಲ. ಇದರಿಂದ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿದೆ. ಸೊಳ್ಳೆ ಕಾಟ ಹೆಚ್ಚಾಗಿ, ಸಾಂಕ್ರಾಮಿಕ ಕಾಯಿಲೆ ಭೀತಿ ಉಂಟಾಗಿದೆ. ಪ್ರತಿ ನಿತ್ಯ ಮಕ್ಕಳು, ಶಿಕ್ಷಕರು ಹಾಗೂ ಸುತ್ತಲಿನ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳಿಯರ ಆರೋಪವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬುದು ಪಾಲಕರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.
"
ಮಹಾಗಾಂವ್ ಗ್ರಾಮದ ವಿರಕ್ತ ಮಠದಿಂದ ಸರ್ಕಾರಿ ಶಾಲೆಗೆ ಹೋಗುವ ಸಿಸಿ ರಸ್ತೆ ಮೇಲೆ ಚರಂಡಿ ನೀರು ಹರಿದು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಶಾಲಾ ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರು ಜಾರಿ ಬೀಳುತ್ತಿದ್ದಾರೆ.