ಸರ್ವಾನುಮತದಿಂದಲೇ ಕೆಂಪೇಗೌಡರ ಪುತ್ಥಳಿಗೆ ಭೂಮಿಪೂಜೆ / DODABALLAPUR

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಪಂನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರೇಮ್​ ಕುಮಾರ್​ ಮಾತನಾಡಿದರು. ಉಪಾಧ್ಯಕ್ಷೆ ಶ್ವೇತಾ ಮುರಳೀಧರ್​, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಪ್ಪ, ಮುನಿಶಂಕರ್​, ರಾಧಾಮಣಿ, ಅಂಬುಜಾಕ್ಷಿ, ನೇತ್ರಾ ಮಧುಕುಮಾರ್​, ಬಿ.ಆನಂದ್​ ಕುಮಾರ್​, ರಾಮಮೂರ್ತಿ ಇತರರು ಇದ್ದರು.
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಪಂನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪ್ರೇಮ್​ ಕುಮಾರ್​ ಮಾತನಾಡಿದರು. ಉಪಾಧ್ಯಕ್ಷೆ ಶ್ವೇತಾ ಮುರಳೀಧರ್​, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಪ್ಪ, ಮುನಿಶಂಕರ್​, ರಾಧಾಮಣಿ, ಅಂಬುಜಾಕ್ಷಿ, ನೇತ್ರಾ ಮಧುಕುಮಾರ್​, ಬಿ.ಆನಂದ್​ ಕುಮಾರ್​, ರಾಮಮೂರ್ತಿ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಿಂದ ಬ್ಯಾಂಕ್​ ಸರ್ಕಲ್​ನಲ್ಲಿ ಕೆಂಪೇಗೌಡ ಕಂಚಿನ ಪುತ್ಥಳಿ ಸ್ಥಾಪನೆಗೆ ಶಾಸಕ ಧೀರಜ್​ ಮುನಿರಾಜು ಕಾನೂನಿನಡಿಯೇ ಭೂಮಿಪೂಜೆ ನೆರವೇರಿಸಿದ್ದಾರೆ ಎಂದು ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್​ ಕುಮಾರ್​ ಸ್ಪಷ್ಪನೆ ನೀಡಿದರು.
ಪಪಂನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್​ಕುಮಾರ್​ ಕೆಂಪೇಗೌಡ ಜಯಂತಿ ಪ್ರಯುಕ್ತ ಜೂ.27ರಂದು ಶಾಸಕರು ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೇರವೆರಿಸಿದ್ದರು. ಇದಕ್ಕೆ ಕೆಲ ಸ್ಥಳಿಯರು ಆಕ್ಷೇಪಣೆ ವ್ಯಕ್ತಪಡಿಸಿ, ಕಾನೂನಾತ್ಮಕವಾಗಿ ಭೂಮಿಪೂಜೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ನಾವು ಕಾನೂನಾತ್ಮಕವಾಗಿಯೇ ಪುತ್ಥಳಿಗೆ ಭೂಮಿಪೂಜೆ ಮಾಡಿದ್ದೇವೆ. ಫೆ.5ರಂದೇ ಶಾಸಕರ ನೇತೃತ್ವದಲ್ಲಿ ನಡೆದ ಪಟ್ಟಣ ಪಂಚಾಯಿತಿ ಸರ್ವ ಸದಸ್ಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ತೀಮಾರ್ನಿಸಿ ಅಂಗೀಕಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ, ಟೆಂಡರ್​ ಪ್ರಕ್ರಿಯೆ ಮಾಡಲಾಗುವುದು ಎಂದು ಪ್ರೇಮಕುಮಾರ್​ ತಿಳಿಸಿದರು.
ಶಾಸಕ ಧೀರಜ್​ ಮುನಿರಾಜು ಅವರ ಬಗ್ಗೆ ಅಪಪ್ರಚಾರ ಮಾಡುವುದು ತರವಲ್ಲ. ಕೆಂಪೇಗೌಡರ ಪುತ್ಥಳಿ ಬಗ್ಗೆ ಅಪಸ್ವರ ತೆಗೆದವರೆಲ್ಲ ಚುನಾವಣೆಯಲ್ಲಿ ಸೋತಿದ್ದಾರೆ. ಹತಾಶೆಯಿಂದ ಹೀಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ. ಬಾಶೆಟ್ಟಿಹಳ್ಳಿ ಪಂಚಾಯಿತಿಗೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳು ಸಂದಿವೆ. ಪುತ್ಥಳಿ ನಿರ್ಮಿಸಲು ಎಲ್ಲ ಸದಸ್ಯರು ಒಪ್ಪಿಗೆ ನೀಡಿದ್ದಾರೆ.
ಜಯಂತಿ ಆಚರಣೆಗೆ ಸ್ಥಳಿಯ ಸಂಘ&ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಎಲ್ಲರಿಗೂ ಆಹ್ವಾನ ನೀಡಿ, ತಿಳಿಸಲಾಗಿತ್ತು. ಕಾಮಗಾರಿಗೆ ಬಜೆಟ್​ನಲ್ಲಿ ಅನುದಾನವನ್ನೂ ಮೀಸಲಿಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net