ನೂತನ ಅಧ್ಯಕ್ಷ ವಿ.ವೆಂಕಟರೆಡ್ಡಿ ಮಾತನಾಡಿ, ಸಂದ ಪ್ರಗತಿ ಹಾಗೂ ಹಾಲಿನ ಉತ್ಪಾದಕರ ಹಿತರಕ್ಷಣೆಗೆ ಶ್ರಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿ.ರಾಮಾಂಜನಪ್ಪ ಮತ್ತು ನಿರ್ದೇಶಕರು ಹಾಗೂ ಗ್ರಾಮದ ಮುಖಂಡರಾದ ಆನಂದ್, ಶ್ರೀರಾಮಪ್ಪ, ವೆಂಕಟರೆಡ್ಡಿ, ಮುನಿರೆಡ್ಡಿ, ಬಂಡಮೀದಹಳ್ಳಿ ವೆಂಕಟರೆಡ್ಡಿ, ಮುನಿಯಪ್ಪ, ನಾಗರಾಜ್, ಬೈರೆಡ್ಡಿ ಹಾಗೂ ಸಂದ ನಿರ್ದೇಶಕರು ಇದ್ದರು.