ಈ ಬಾರಿ ಬೇಸಿಗೆ ಪ್ರಾರಂಭದಲ್ಲಿ ಬಿಸಿಲಿನ ತಾಪಮಾನ 41.1ಡಿಗ್ರಿ ಸೇ. ಇರುವುದರಿಂದ ಗ್ರಾಹಕರು ಕೇವಲ ಬೆಳಗ್ಗೆ ಹಾಗು ಸಂಜೆ ಮಾತ್ರ ಆಗಮಿಸುತ್ತಿದ್ದು, ನಗರದ ಮಾರುಕಟ್ಟೆಯಲ್ಲಿ ಹಬ್ಬದ ಆಚರಣೆಗೆ ಆಗತ್ಯವಾದ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿದ್ದ ವಿವಿಧ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಖರ್ಜೂರ ಸೇರಿ ವಿವಿಧ ಹಣ್ಣುಗಳು ದರ ಗಗನಕ್ಕೆ ಏರಿದ್ದು, ಕೆಜಿ. ಹಣ್ಣಿಗೆ 100 ರಿಂದ 150 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ತೆಂಗಿನ ಕಾಯಿಯಲ್ಲೂ ದರ ಹೆಚ್ಚಾಗಿದ್ದು, ಒಂದು ಕಾಯಿಗೆ 40 ರಿಂದ 50ರ ವರೆಗೆ ಮಾರಾಟವಾಗಿದೆ. ವರ್ಷದ ಮೊದಲ ಹಬ್ಬವಾದ ಯುಗಾದಿಗೆ ವ್ಯಾಪಾರ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದು,ಆದರೆ ಬಿಸಿಲು ಹೆಚ್ಚಳವಾಗಿರುವುದರಿಂದ ಕೇಲವರು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವ್ಯಾಪಾರಿಗಳಲ್ಲಿ ನಿರಾಸೆ ಮೂಡಿಸಿದೆ.