ಎರಡು ತಾಲೂಕಿಗೆ ಒಬ್ಬರೇ ಬಿಇಒ!

ಎರಡು ತಾಲೂಕಿಗೆ ಒಬ್ಬರೇ ಬಿಇಒ
ಎರಡು ತಾಲೂಕಿಗೆ ಒಬ್ಬರೇ ಬಿಇಒ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ತಾಲೂಕಿಗೆ ಒಬ್ಬರೇ ಬಿಇಒ
  • ಚಿಕ್ಕೋಡಿ, ಹುಕ್ಕೇರಿ ತಾಲೂಕಿಗೆ ಒಬ್ಬರೆ ಕಾರ್ಯ
  • ಚಿಕ್ಕೋಡಿಗಿಲ್ಲ ಖಾಯಂ ಅಧಿಕಾರಿ
ಎರಡು ತಾಲೂಕಿಗೆ ಒಬ್ಬರೇ ಬಿಐಒ
| ಚಿಕ್ಕೋಡಿ ತಾಲೂಕಿಲ್ಲ ಹುದ್ದೆ ಖಾಯಂ| ಕಳೆದ ಒಂದು ವರ್ಷದಿಂದ ಖಾಲಿ !
ಆನಂದ ಭಮ್ಮನ್ನವರ ಚಿಕ್ಕೋಡಿ:
ರಾಜ್ಯ ಸರ್ಕಾರ ಖಾಲಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳದ ಪರಿಣಾಮ ಜಿಲ್ಲೆಯ ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿಗೆ ಕಳೆದ ಒಂದು ವರ್ಷದಿಂದ ಒಬ್ಬರೇ ಬಿಇಒ ಕಾರ್ಯನಿರ್ವಹಣೆ ಮಾಡುತ್ತಿರುವುದು ಎರಡು ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹಿನ್ನಡೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಸ್ಥಾನಮಾನ ಪಡೆದಿದೆ.ಆದರೆ ನಗರದ ಕೇಂದ್ರ ಸ್ಥಳದಲ್ಲಿ ಕಚೇರಿಯಲ್ಲಿ ಖಾಯಂ ಶಿಕ್ಷಣಾಧಿಕಾರಿ ಇಲ್ಲದೇ ಇರುವುದು ಸಾಕಷ್ಟು ತೊಂದರೆಗೆ ಕಾರಣ. ಕಳೆದ ಹದಿನೈದು ತಿಂಗಳ ಹಿಂದೆ ಬಿಐಒ ವರ್ಗಾವಣೆಯಾದ ಬಳಿಕ ಹುಕ್ಕೇರಿ ಬಿಇಒ ಪ್ರಭಾವತಿ ಪಾಟೀಲ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಆದರೆ ಎರಡು ತಾಲೂಕು ಒಬ್ಬರೇ ನಿರ್ವಹಣೆ ಮಾಡುತ್ತಿರುವುದು ಸಾಕಷ್ಟು ತೊಂದರೆಗೂ ಕಾರಣವಾಗಿದೆ.
ಬಿಇಒ ಹುದ್ದೆಗೆ ಹೆಚ್ಚು`ವರಿ`
ಚಿಕ್ಕೋಡಿ ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢ ಶಾಲೆ ೭೩,ಪ್ರಾಥಮಿಕ ಶಾಲೆ ೨೭೫, ಅನುದಾನಿತ ಶಾಲೆ ಸೇರಿ ಒಟ್ಟು ೩೯೩ ಶಾಲೆಗಳಿವೆ. ಜೊತೆಗೆ ಪ್ರವಾಹ ಪೀಡಿತ ಪ್ರದೇಶ , ಗಡಿ ಭಾಗದ ಶಾಲೆಗಳು ಇವೆ. ಸ್ಥಳೀಯ ಕಚೇರಿಯಲ್ಲಿ ಶಿಕ್ಷಣಾಧಿಕಾರಿ ಹುದ್ದೆ ಖಾಲಿಯಿರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ. ಹೆಚ್ಚುವರಿಯಾಗಿ ಹುಕ್ಕೇರಿ ಬಿಐಒ ಪ್ರಭಾವತಿ ಪಾಟೀಲ ಜವಾಬ್ದಾರಿ ವಹಿಸಿಕೊಂಡಿದ್ದರೂ, ಹುಕ್ಕೇರಿ ತಾಲೂಕಿನಲ್ಲಿ 400ಕ್ಕೂ ಅಧಿಕ ಶಾಲೆಗಳು ಸೇರಿಕೊಂಡಿವೆ ಚಿಕ್ಕೋಡಿ ತಾಲೂಕಿನ ಜವಾಬ್ದಾರಿ ನಿಭಾಯಿಸುವುದು ಕಷ್ಟಕರವಾಗಿದೆ.ಇದರಿಂದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುವುದರಿಂದ ಶಿಕ್ಷಕರ ಮಾತಾಗಿದೆ.
ಆಡಳಿತಾತ್ಮಕ ಹಿನ್ನಡೆ!
ತಾಲೂಕಿನ ಶಿಕ್ಷಣದ ಗುಣಮಟ್ಟವು ಆಯಾ ತಾಲೂಕಿನ ಬಿಇಒ ಕಾರ್ಯವೈಖರಿ ಮೇಲೆ ಅವಲಂಬಿಸಿರುವುದನ್ನು ಅಲ್ಲಗಳೆಯಲಾಗಿದೆ. ಆದರೆ ಹೆಚ್ಚಿನ ಕಾರ್ಯದ ಒತ್ತಡದಿಂದ ಎರಡು ಕಡೆ ಗಮನ ನೀಡುವುದು ಸುಲಭದ ಮಾತಲ್ಲ. ಬಿಐಒ ಅವರ ತಾಲೂಕಿನ ಶಾಲೆಗಳ ಆಡಳಿತ ಮೇಲ್ವಿಚಾರಣೆ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಾವಣೆ, ರಜೆ ಮಂಜೂರಾತಿ ಮತ್ತು ವೇತನ ಬಟವಾಡೆ, ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ, ಶಾಲೆಗಳಿಗೆ ಭೇಟಿ, ಶೈಕ್ಷಣಿಕ ಪ್ರಗತಿ ಪರಿಶೀಲನೆ, ಪರೀಕ್ಷೆಗಳು ಸುಗಮವಾಗಿ ನೋಡಿಕೊಳ್ಳುವುದು ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಆರೋಗ್ಯ ಅಧಿಕಾರಿ ಇಷ್ಟೆಲ್ಲ ಕಾರ್ಯಗಳನ್ನು ಎರಡು ತಾಲೂಕಿನಲ್ಲಿ ನಿಭಾಯಿಸುತ್ತಾರೆ ಆಗಿದೆ.
ಭಾಕ್ಸ್
ಶಾಲೆಗಳು ಪ್ರಾರಂಭವಾಗುತ್ತಿವೆ. ಶಿಕ್ಷಣದಿಂದ ಸಾಕಷ್ಟು ಕೆಲಸ ಕಾರ್ಯಗಳಿವೆ. ಪಠ್ಯಪುಸ್ತಕ ವಿತರಣೆ,ದಾಖಲಾತಿ, ಶಾಲೆಗಳ ಮೂಲಕ ಸೌಕರ್ಯ ಒದಗಿಸುವುದು ಸೇರಿ ಸಾಕಷ್ಟು ಕೆಲಸಗಳಿವೆ. ಒಬ್ಬರೆ ಬಿಇಒ ಎರಡು ದೊಡ್ಡ ತಾಲ್ಲೂಕಿನ ಕಾರ್ಯ ಮಾಡುವುದು ಎರಡು ತಾಲ್ಲೂಕಿನ ಶೈಕ್ಷಣಿಕ, ಆಡಳಿತಾತ್ಮಕ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಕೂಡಲೇ ಸರ್ಕಾರ ಚಿಕ್ಕೋಡಿ ಬಿಐಒ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವಂತೆ ಶಿಕ್ಷಕರ ವರ್ಗವನ್ನು ಒತ್ತಾಯಿಸಿದೆ.
ಕೋಟ್
ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಬಡ್ತಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಇದು ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸವಾಗಿದೆ. ಮುಂದಿನ ತಿಂಗಳ ಬಿಇಒ ನೇಮಕಾತಿ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಸೀತಾರಾಮು ಆರ್.ಎಸ್.
ಡಿಡಿಪಿಐ ಚಿಕ್ಕೋಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net